ಅಧ್ಯಕ್ಷ-ಉಪಾಧ್ಯಕ್ಷರಿಂದ ಈದ್ಗಾ ಮೈದಾನದ ಸ್ವಚ್ಛತಾ ಕಾರ್ಯ ವೀಕ್ಷಣೆ

ಕೊಪ್ಪಳ. ಪವಿತ್ರ ರಮ್‌ಜಾನ್ ಹಬ್ಬದ ಪ್ರಯುಕ್ತ ಇದೇ ಜು. ೨೯ರಂದು ಇಲ್ಲಿನ ನಗರಸಭೆ ಬಳಿಯ ಈದ್ಗಾ ಮೈದಾನದಲ್ಲಿ ನಡೆಯಲಿರುವ ಸಾಮೂಹಿಕ ಪ್ರಾರ್ಥನಾ ಮೈದಾನದ ಸ್ವಚ್ಛತಾ ಕಾರ್ಯ ಭರದಿಂದ ಸಾಗಿದ್ದು, ಶನಿವಾರ ನಗರಸಭೆ ಅಧ್ಯಕ್ಷೆ ಲತಾ ವೀರಣ್ಣ ಸೊಂಡೂರ, ಉಪಾಧ್ಯಕ್ಷ ಅಮ್ಜದ್ ಪಟೇಲ್ ಹಾಗೂ ನೂತನ ಪೌರಾಯುಕ್ತ ರಮೇಶ ಪಟ್ಟೆದಾರ ಮೈದಾನದ ಸ್ವಚ್ಛತಾ ಕಾರ್ಯ ವೀಕ್ಷಿಸಿದರು.
ನಗರಸಭೆ ಬಳಿಯ ಹಾಗೂ ಹುಲಿಕೆರೆ ಬಳಿಯ ಈದ್ಗಾ ಮೈದಾನಗಳ ಸ್ವಚ್ಛತಾ ಕಾರ್ಯವನ್ನು ಈಗಾಗಲೇ ನಗರಸಭೆ ಕೈಗೊಂಡಿದ್ದು, ಸ್ವಚ್ಛತಾ ಕಾರ್ಯ ಅಂತಿಮ ಹಂತದಲ್ಲಿದ್ದು, ಈ ಎರಡೂ ಮೈದಾನಗಳ ಸ್ವಚ್ಛತಾ ಕಾರ್ಯವನ್ನು ನಗರಸಭೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳ ತಂಡ ಪರಿಶೀಲನೆ ನಡೆಸಿತು.
ನಗರಸಭೆ ಬಳಿಯ ಹಾಗೂ ಹುಲಿಕೆರೆ ಬಳಿಯ ಎರಡೂ ಈದ್ಗಾ ಮೈದಾನಗಳ ಸ್ವಚ್ಛತಾ ಕಾರ್ಯವನ್ನು ತುರ್ತಾಗಿ ಕೈಗೊಂಡು, ಸಾಮೂಹಿಕ ಪ್ರಾರ್ಥನೆಗೆ ಬರುವವರಿಗೆ ಕುಡಿವ ನೀರು ಪೂರೈಕೆ ಸೇರಿದಂತೆ ಸಾಮೂಹಿಕ ಪ್ರಾರ್ಥನೆ ವೇಳೆ ಮುಸ್ಲಿಂ ಸಮಾಜದ ಬಂಧುಗಳಿಗೆ ಶುಭ ಹಾರೈಸಲು ಬರುವ ಗಣ್ಯರಿಗೆ, ನಾಗರಿಕರಿಗೆ, ಅಧಿಕಾರಿಗಳಿಗೆ ಕುಳಿತುಕೊಳ್ಳಲು ಆಸನ ವ್ಯವಸ್ಥೆಯನ್ನೂ ಕೈಗೊಳ್ಳುವಂತೆ ಅಧ್ಯಕ್ಷ-ಉಪಾಧ್ಯಕ್ಷರು ಸಂಬಂಧಪಟ್ಟವರಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಣ್ಣ ಹದ್ದಿನ, ಸಹಾಯಕ ಅಭಿಯಂತರ ಮಂಜುನಾಥ, ಕಿರಿಯ ಅಭಿಯಂತರ ವಿರೇಶ ಸವಡಿ, ನೈರ್ಮಲ್ಯ ನಿರೀಕ್ಷಕ ವಿರೂಪಾಕ್ಷಿ, ಸಹಾಯಕ ನೈರ್ಮಲ್ಯ ನಿರೀಕ್ಷಕ ಸಲೀಂ, ಮುಖಂಡ ರಹೀಮ ಕಾರ್ಪೆಂಟರ್, ಹಟಗಾರ ಪೇಟೆ ಪಂಚಕಮೀಟಿ ಅಧ್ಯಕ್ಷ ರಹೆಮತ ಹುಸೇನಿ ಮತ್ತಿತರರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment