ಈ ರಸ್ತೆಗೆ ಇನ್ನೆಷ್ಟು ಬಲಿಗಳು ಬೇಕು ?

ನಗರದ ಮುಖ್ಯ ರಸ್ತೆಯನ್ನು ಅಭಿವೃದ್ದಿ ಮಾಡಲು ಎಷ್ಟು ದಿನ ಬೇಕು? ದಿನಗಳೇ ? ಸಾಧ್ಯವಿಲ್ಲ… ಎಷ್ಟು ವರುಷಗಳು ಬೇಕು?  ಕೇವಲ ಒಂದು ಮುಖ್ಯ ರಸ್ತೆಯನ್ನು ಅಭಿವೃದ್ದಿ ಮಾಡಲು ಹಲವಾರು ವರುಷಗಳೇ ಬೇಕಾಗಬಹುದು ? ಇದು ಹೇಗೆ ಎಂದಿರಾ ಬನ್ನಿ ಸ್ವಾಮಿ ನಮ್ಮ ನಗರದ ಮುಖ್ಯ ರಸ್ತೆಗೆ. ದಿನಾಲೂ ಒಂದಿಲ್ಲೊಂದು ಅವಘಡಕ್ಕೆ ಸಾಕ್ಷಿಯಾಗಿದೆ ನಮ್ಮ ರಾಷ್ಟ್ರೀಯ ಹೆದ್ದಾರಿ. ರಸ್ತೆಯ ಅಗಲೀಕರಣಕ್ಕೆ, ಕಟ್ಟಡಗಳನ್ನು ಒಡೆಯಲಿಕ್ಕೆ ತೋರಿಸಿದ ಆಸಕ್ತಿ ಅದರ ನಿರ್ಮಾಣದತ್ತ ತೋರಿಸದ ಪರಿಣಾಮ ವರ್ಷಗಳೇ ಕಳೆದರೂ ಇನ್ನೂ ನಮ್ಮ ಮುಖ್ಯ ರಸ್ತೆ ಸಿದ್ದವಾಗಿಲ್ಲ. ಜನಪ್ರತಿನಿಧಿಗಳಿಗೆ ನೆಪ ಹೇಳಿ ಹೇಳಿ ಸಾಕಾಗಿದೆ. ಜನರಿಗೆ ಕೇಳಿ ಕೇಳಿ ಸಾಕಾಗಿದೆ.
 ಇಂದು ಬೆಳಿಗ್ಗೆ ಬನ್ನಿಕಟ್ಟಿ ಕ್ರಾಸ್ ಬಳಿ ಲಾರಿಯೊಂದು ರಸ್ತೆ ಮದ್ಯೆಯೇ ಸಿಕ್ಕಿಹಾಕೊಂಡಿದೆ. ಅಕ್ಕಪಕ್ಕದಲ್ಲಿ ಆಸ್ಪತ್ರೆಗಳಿವೆ  , ಶಾಲೆಗಳಿವೆ   ಜನರ ದೂರು ಕೇಳುವವರು ಯಾರು?.ಎಲ್ಲ ಜನಪ್ರತಿನಿಧಿಗಳ ಕತೆಯೂ ಅಷ್ಟೇ ! ಬೇಸತ್ತ ಜನತೆ ಟೈರಿಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

Please follow and like us:
error