ಜನಧನ ಯೋಜನೆ ಶೀಘ್ರ ಅಂತ್ಯ : ಕೂಡಲೆ ಬ್ಯಾಂಕ್ ಖಾತೆ ತೆರೆಯಲು ಸೂಚನೆ

): ಪ್ರತಿ ಕುಟುಂಬವೂ ಬ್ಯಾಂಕ್ ಖಾತೆಯನ್ನು ಹೊಂದುವಂತೆ ಮಾಡುವ ಪ್ರಧಾನಮಂತ್ರಿ ಜನಧನ ಯೋಜನೆ ಶೀಘ್ರ ಪೂರ್ಣಗೊಳ್ಳಲಿದ್ದು, ಇದುವರೆಗೂ ಬ್ಯಾಂಕ್ ಖಾತೆ ಹೊಂದದೇ ಇರುವ ಕುಟುಂಬಗಳು ತಮ್ಮ ವ್ಯಾಪ್ತಿಯ ಬ್ಯಾಂಕ್‍ನಲ್ಲಿ ಖಾತೆ ಹೊಂದುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಸೂಚನೆ ನೀಡಿದ್ದಾರೆ.
     ಪ್ರಧಾನಮಂತ್ರಿ ಜನಧನ ಯೋಜನೆಯಡಿ ಪ್ರತಿಯೊಂದು ಕುಟುಂಬವೂ ಬ್ಯಾಂಕ್ ಖಾತೆಯನ್ನು ಹೊಂದುವಂತೆ ಮಾಡಲು ವಿಶೇಷ ಆಂದೋಲನವನ್ನು ಕಳೆದ ಆಗಸ್ಟ್ 15 ರಿಂದ ಕೈಗೊಳ್ಳಲಾಗಿದೆ.  ಪ್ರತಿ ಬ್ಯಾಂಕಿನ ವತಿಯಿಂದ ತಮ್ಮ ಸೇವಾ ವ್ಯಾಪ್ತಿಯ ನಗರ, ಪಟ್ಟಣ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮನೆ, ಮನೆಗೆ ತೆರಳಿ ಸರ್ವೆ ಕಾರ್ಯ ಕೈಗೊಂಡು ಬ್ಯಾಂಕ್ ಖಾತೆ ಇದ್ದವರು ಮತ್ತು ಇಲ್ಲದಿರುವವರ ಬ್ಯಾಂಕ್ ಖಾತೆ ತೆರೆಯುವ ಅಭಿಯಾನ ನಡೆಸಲಾಯಿತು.  ಈಗಾಗಲೆ ಪ್ರತಿ ಕುಟುಂಬದ ಬ್ಯಾಂಕ್ ಖಾತೆ ತೆರೆಯಲು ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಈ ಯೋಜನೆ ಶೀಘ್ರದಲ್ಲೇ ಪೂರ್ಣಗೊಳ್ಳಲಿದೆ.  ಇದುವರೆಗೂ ಬ್ಯಾಂಕ್ ಖಾತೆ ಹೊಂದದೇ ಇರುವ ಕುಟುಂಬಗಳು ಕೂಡಲೆ ಆಯಾ ಗ್ರಾಮದ ವ್ಯಾಪ್ತಿ ಅಥವಾ ನಗರ/ಪಟ್ಟಣದ ವಾರ್ಡ್ ವ್ಯಾಪ್ತಿಗೆ ನಿಗದಿಪಡಿಸಿರುವ ಬ್ಯಾಂಕ್‍ಗೆ ತೆರಳಿ ಖಾತೆ ತೆರೆದುಕೊಳ್ಳಬೇಕು.  ಇದಕ್ಕಾಗಿ ಆಯಾ ಬ್ಯಾಂಕುಗಳು ಪ್ರತಿ ಗುರುವಾರ ಮತ್ತು ಶುಕ್ರವಾರ ವಿಶೇಷ ಕೌಂಟರ್ ತೆಗೆದು ಖಾತೆ ತೆರೆಯುವ ಅಭಿಯಾನವನ್ನು ಹಮ್ಮಿಕೊಂಡಿರುತ್ತಾರೆ.  ಈ ಕುರಿತಂತೆ ಯಾವುದೇ ಮಾಹಿತಿ ಪಡೆಯಲು, ಸಮೀಪದ ಬ್ಯಾಂಕ್ ಶಾಖೆ ಅಥವಾ ಜಿಲ್ಲಾ ಲೀಡ್ ಬ್ಯಾಂಕ್- 08539-220976 ಕ್ಕೆ ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಆರ್.ಆರ್. ಜನ್ನು . ತಿಳಿಸಿದ್ದಾರೆ.

Leave a Reply