fbpx

‘ಸಂವಿಧಾನ ಸಮರ್ಪಣೆ ದಿನಾಚರಣೆ ಸರ್ವರಿಗೂ ಸ್ವಾಗತವಿದೆ….

ಆತ್ಮೀಯರೇ, ಧಾರವಾಡದ ಗಣಕರಂಗ ಮತ್ತು ಸಮಾನ ಮನಸ್ಕರ ವಿಚಾರ ವೇದಿಕೆಗಳ ಸಂಯುಕ್ತ ಆಶ್ರಯದಲ್ಲಿ ನಾಳೆ ರವಿವಾರ (25-01-2015) ಬೆಳಿಗ್ಗೆ 10 ಗಂಟೆಗೆ ಧಾರವಾಡದ ರಂಗಾಯಣದ ಸಭಾಭವನದಲ್ಲಿ ‘ಸಂವಿಧಾನ ಸಮರ್ಪಣೆ ದಿನಾಚರಣೆ’ಯನ್ನು ಆಚರಿಸಲಾಗುತ್ತಿದೆ. 
                    ಮಹಾ ಮಾನವತಾವಾದಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪ್ರಬುದ್ಧ ಭಾರತದ ಕನಸು ಕಂಡು ಈ ದೇಶಕ್ಕೆ ಸೂಕ್ತವಾದ ಸಂವಿಧಾನ ರಚಿಸಿ, ಸಮರ್ಪಿಸುವ ಮೂಲಕ ಗಣತಂತ್ರ ವ್ಯವಸ್ಥೆಗೆ ಭದ್ರ ಬುನಾದಿ ಹಾಕಿದರು. ವಿಶ್ವದಲ್ಲಿಯೇ ಶ್ರೇಷ್ಠ ಸಂವಿಧಾನದಡಿಯಲ್ಲಿ ನಡೆಯುತ್ತಿರುವ ನಮ್ಮ ದೇಶದ ಪ್ರಜಾಪ್ರಭುತ್ವವೆಂಬ ಮಹಾಮಾರ್ಗದ ವ್ಯವಸ್ಥೆಯ ಮಹತ್ವದ ಕುರಿತು ತಿಳಿಸಲು ಚಿಂತಕರು, ಹೋರಾಟಗಾರರು ಈ ಕಾರ್ಯಕ್ರಮದಲ್ಲಿ ಭಾಗವಹಿಸುವರು. ಪ್ರಾಸ್ತಾವಿಕವಾಗಿ ನ್ಯಾಯವಾದಿ ಮಹಾದೇವ ದೊಡಮನಿ ಮಾತನಾಡುವರು. ಉದ್ಘಾಟನೆಯನ್ನು ಹು-ಧಾ ಮಹಾನಗರ ಪಾಲಿಕೆ ಸದಸ್ಯರಾದ ಸುಭಾಸ ಸಿಂಧೆ ನೇರವೇರಿಸುವರು. ಮುಖ್ಯ ಅತಿಥಿಗಳಾಗಿ ಧಾರವಾಡ ಪ್ರಾದೇಶಿಕ ಸಾರಿಗೆ ಕಚೇರಿಯ ಅಧಿಕಾರಿ ರವೀಂದ್ರ ಕವಲಿ ಆಗಮಿಸುವರು. ಕರ್ನಾಟಕ ವಿಶ್ವವಿದ್ಯಾಲಯದ ಅಂಬೇಡ್ಕರ್ ಅಧ್ಯಯನ ಪೀಠದ ಉಪನ್ಯಾಸಕ ಡಾ.ಎಸ್.ಎಸ್.ಸಿರೇಶಿ ಮತ್ತು ಧಾರವಾಡದ ಐಡಿಬಿಐ ಬ್ಯಾಂಕ್ ವ್ಯವಸ್ಥಾಪಕರಾದ ಶ್ರೀಮತಿ ರಾಜೇಶ್ವರಿ ನಿಡಗುಂದಿ ಅವರು ವಿಶೇಷ ಉಪನ್ಯಾಸ ನೀಡಲಿದ್ದಾರೆ. ವಿಶೇಷ ಆಹ್ವಾನಿತರಾಗಿ ಯುವಕಾಂಗ್ರೆಸ್ ಸಮಿತಿಯ ಉಪಾಧ್ಯಕ್ಷ ವೆಂಕಟೇಶ ರಾಯ್ಕರ್, ದಕ್ಷಿಣಭಾರತ ಹಿಂದಿ ಪ್ರಚಾರ ಸಭಾದ ಉಪನ್ಯಾಸಕಿ ಶ್ರೀಮತಿ ಉಮಾ ಚವ್ಹಾಣ, ಮತ್ತು ಸಾಮಾಜಿಕ ಕಾರ್ಯಕರ್ತೆ ಶ್ರೀಮತಿ ಇಂದಿರಾ ಬಂಕಾಪುರ ಆಗಮಿಸಲಿದ್ದಾರೆ.  ಕರವೇ (ಸ್ವಾಭಿಮಾನಿ ಬಣ)ದ ಜಿಲ್ಲಾಧ್ಯಕ್ಷರಾದ ಪಾಪು ಧಾರೆ, ಧಾರವಾಡದ ಸರಕಾರಿ ಚಿತ್ರಕಲಾ ಮಹಾವಿದ್ಯಾಲಯದ ಮುಖ್ಯಸ್ಥರಾದ ಸಿ.ಸಿ.ಬಾರಕೇರ ಉಪಸ್ಥಿತರಿರುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರಾದ ಲಕ್ಷ್ಮಣ ಬಕ್ಕಾಯಿ ಅವರು ವಹಿಸಿಕೊಳ್ಳುವರು ಎಂದು ಕಾರ್ಯಕ್ರಮ ಸಂಯೋಜಕರಾದ ರಂಗಕರ್ಮಿ ಹಿಪ್ಪರಗಿ ಸಿದ್ಧರಾಮ (98451 09480) ತಿಳಿಸಿದ್ದಾರೆ. 
ಸರ್ವರಿಗೂ ಸ್ವಾಗತವಿದೆ….
Please follow and like us:
error

Leave a Reply

error: Content is protected !!