ಜುಲೈ ೨೪,೨೫,೨೬,೨೭,೨೮ ರಂದು ರಕ್ತದಾನ ಶಿಬಿರ.

ಕೊಪ್ಪಳ – ಜಿಲ್ಲೆಯ ಕುಕನೂರು, ವೆಂಕಟಗಿರಿ, ಅಳವಂಡಿ, ನಿಲೋಗಲ್ ಹಾಗೂ ಕಾರಟಗಿ ಗ್ರಾಮದಲ್ಲಿ ಜುಲೈ ೨೪,೨೫,೨೬,೨೭,೨೮ ರಂದು ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಜಿಲ್ಲಾ ಶಾಖೆ, ಕೊಪ್ಪಳದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಲಾಗಿದೆ.ಕುಕನೂರು – ಕೊಪ್ಪಳ ತಾಲೂಕಿನ ಕುಕನೂರು ಗ್ರಾಮದಲ್ಲಿ ದಿ. ೨೪ ರಂದು ಶುಕ್ರವಾರ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ. ವೆಂಕಟಗಿರಿ – ವೆಂಕಟಗಿರಿ ಗ್ರಾಮದಲ್ಲಿ ದಿ. ೨೫ ರಂದು ಶನಿವಾರ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ.ಅಳವಂಡಿ – ಅಳವಂಡಿ ಗ್ರಾಮದಲ್ಲಿ ದಿ. ೨೬ ರಂದು ರವಿವಾರ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ.
 ನಿಲೋಗಲ್ – ನಿಲೋಗಲ್ ಗ್ರಾಮದಲ್ಲಿ ದಿ. ೨೭ ರಂದು ಸೋಮವಾರ ಗ್ರಾಮ ಪಂಚಾಯಿತಿ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ.ಹನಮಸಾಗರ – ಹನಮಸಾಗರ ಗ್ರಾಮದಲ್ಲಿ ದಿ. ೨೭ ರಂದು ಸೋಮವಾರ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ವಿವೇಕ ಶ್ರೀನಿವಾಸ ಕಣ್ಣಿನ ಆಸ್ಪತ್ರೆ, ಎ.ಪಿ.ಎಮ್.ಸಿ. ಹತ್ತಿರ ಇಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ.ಕಾರಟಗಿ – ಕಾರಟಗಿ ಗ್ರಾಮದಲ್ಲಿ ದಿ. ೨೮ ರಂದು ಮಂಗಳವಾರ ಗ್ರಾಮ ಪಂಚಾಯಿತಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ರಕ್ತದಾನ ಶಿಬಿರ ಆಯೋಜಿಸಿದ್ದು ಗ್ರಾಮ ಪಂಚಾಯಿತಿಯಲ್ಲಿ ಅಂದು ಬೆಳಿಗ್ಗೆ ೧೦ ರಿಂದ ೦೪ ಗಂಟೆಯವರೆಗೆ ಜರುಗಲಿದೆ.ಎಲ್ಲಾ ಶಿಬಿರಗಳಲ್ಲಿ ಆಸಕ್ತರು ರಕ್ತದಾನ ಮಾಡಿ ಸಹಕರಿಸುವಂತೆ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿ ಡಾ. ಶ್ರೀನಿವಾಸ ಹ್ಯಾಟಿ ಕೋರಿದ್ದಾರೆ.
                   
Please follow and like us:

Leave a Reply