ಕೊಪ್ಪಳ ಉಪಚುನಾವಣೆ : ಸೆ. ೩ ರಂದು ಯಾವುದೇ ನಾಮಪತ್ರ ಸಲ್ಲಿಕೆ ಇಲ್ಲ

ಕೊಪ್ಪಳ ಸೆ. ೦೩ (ಕ.ವಾ): ಕೊಪ್ಪಳ ವಿಧಾನಸಭಾ ಕ್ಷೇತ್ರ ಉಪಚುನಾವಣೆಗೆ ಸಂಬಂಧಿಸಿದಂತೆ ಸೆ. ೩ ರಂದು ಶನಿವಾರ ಯಾವುದೇ ನಾಮಪತ್ರ ಸಲ್ಲಿಕೆಯಾಗಿಲ್ಲ.
ಇನ್ನೂ ಗೊಂದಲದಲ್ಲಿರುವ ಅಭ್ಯರ್ಥಿಗಳು ಕಾದು ನೋಡುವ ತಂತ್ರ   ಉಪಯೋಗಿಸುತ್ತಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ಈಗಾಗಲೇ ತಮ್ಮ ಅಭ್ಯರ್ಥಿಗಳ ಘೋಷಣೇ ಮಾಡಿದ್ದರೆ  ಜೆಡಿಎಸ್ ಇನ್ನೂ ಮೀನಮೇಷ  ಏಣಿಸುತ್ತಿದೆ.
  ಚುನಾವಣೆಗೆ ಅಧಿಸೂಚನೆ ಹೊರಡಿಸಿರುವ ನಂತರ ಇದುವರೆಗೂ ಯಾವುದೇ ನಾಮಪತ್ರಗಳು ಸಲ್ಲಿಕೆಯಾಗಿಲ್ಲ ನಾಮಪತ್ರಗಳನ್ನು ಸಲ್ಲಿಸಲು ಸೆ. ೯ ಕೊನೆಯ ದಿನಾಂಕವಾಗಿರುತ್ತದೆ ಎಂದು ಚುನಾವಣಾಧಿಕಾರಿಯಾಗಿರುವ ಸಹಾಯಕ ಆಯುಕ್ತ ಎಂ. ಶರಣಬಸಪ್ಪ ಅವರು ತಿಳಿಸಿದ್ದಾರೆ.
Please follow and like us:
error