ಚುನಾವಣೆ : ವೆಚ್ಚದ ವಿವರಗಳನ್ನು ದಿನನಿತ್ಯ ಸಲ್ಲಿಸಲು ಪಿಡಿಓಗಳಿಗೆ ಸೂಚನೆ

 ಲೋಕಸಭಾ ಚುನಾವಣೆಗೆ ಸಂಬಂಧಿತ ಖರ್ಚಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ಪ್ರತಿನಿತ್ಯ ಆಯಾ ಕ್ಷೇತ್ರ ಚುನಾವಣಾಧಿಕಾರಿ ಗಳಿಗೆ ತಪ್ಪದೆ ಸಲ್ಲಿಸಬೇಕು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಪಿಡಿಓ ಗಳಿಗೆ ಸೂಚನೆ ನೀಡಿದ್ದಾರೆ.

  ಚುನಾವಣೆಗೆ ಸಂಬಂಧಿತ ಖರ್ಚಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ಪ್ರತಿನಿತ್ಯ ನಿಖರವಾದ ಮಾಹಿತಿಯನ್ನು ಆಯಾ ತಾಲೂಕಿನ ಚುನಾವಣಾಧಿಕಾರಿಗಳಿಗೆ ತಲುಪಿಸಬೇಕು.  ಒಂದು ವೇಳೆ ಮಾಹಿತಿ ಶೂನ್ಯವಿದ್ದಲ್ಲಿ, ಶೂನ್ಯ ವರದಿಯನ್ನು ಚುನಾವಣೆ ಮುಗಿಯುವವರೆಗೆ ಪ್ರತಿನಿತ್ಯ ಕಳುಹಿಸಬೇಕು.  ಸೇವಾ ನ್ಯೂನತೆ ಕಂಡುಬಂದಲ್ಲಿ ಅಂತಹ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳನ್ನೇ ಜವಾಬ್ದಾರರನ್ನಾಗಿಸಿ ಕ್ರಮ ಜರುಗಿಸಲಾಗುವುದು ಎಂದು ಜಿ.ಪಂ.ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಎಚ್ಚರಿಕೆ ನೀಡಿದ್ದಾರೆ.

Leave a Reply