ಉದ್ಯೋಗಸ್ಥ ಮಹಿಳೆಯರಿಗೆ ವಸತಿಗೃಹ

 ಪ್ರಸ್ತಾವನೆಗಳಿಗೆ ಆಹ್ವಾನ
ಕೊಪ್ಪಳ ಡಿ.   ರಾಜ್ಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯು ಕೇಂದ್ರ ಸರ್ಕಾರದ ಸಹಭಾಗಿತ್ವದೊಂದಿಗೆ ಉದ್ಯೋಗಸ್ಥ ಮಹಿಳೆಯರಿಗೆ ವಸತಿ ಗೃಹ ವ್ಯವಸ್ಥೆ ಕಲ್ಪಿಸುವ ಕುರಿತು ಆಸಕ್ತ ಸಂಸ್ಥೆಗಳಿಂದ ಪ್ರಸ್ತಾವನೆಗಳನ್ನು ಆಹ್ವಾನಿಸಿದೆ.
  ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ಹೆಚ್ಚು, ಹೆಚ್ಚು ತೊಡಗಿಸಿಕೊಳ್ಳುತ್ತಿದ್ದು, ಹೊಸ ಹೊಸ ಉದ್ಯೋಗಗಳ ಅನ್ವೇಷಣೆಗಾಗಿ ನಗರದತ್ತ ವಲಸೆ ಹೋಗುವ ಪ್ರಮಾಣ ಹೆಚ್ಚಾಗುತ್ತಿದೆ.  ವಾಸಸ್ಥಳದಿಂದ ಉದ್ಯೋಗದ ಸ್ಥಳ ದೂರವಿರುವ ಹಾಗೂ ಬಡ ಮತ್ತು ಮಧ್ಯಮ ವರ್ಗದ ಕುಟುಂಬಗಳ ಮಹಿಳೆಯರಿಗೆ ಮಹಿಳೆಯರ ವಸತಿಗೃಹಗಳು ರಕ್ಷಣೆ ಮತ್ತು ಭದ್ರತೆಗಳನ್ನು ಒದಗಿಸುತ್ತಿವೆ.  ಕೇಂದ್ರ ಸರ್ಕಾರವು ಈ ಯೋಜನೆಯನ್ನು ೧೯೭೨-೭೩ ರಿಂದಲೂ ಕಾರ್ಯಗತಗೊಳಿಸುತ್ತಿದೆ.  ಉದ್ಯೋಗಸ್ಥ ಮಹಿಳೆಯರ ವಸತಿ ಗೃಹ ಯೋಜನೆಯನ್ನು ಸ್ವಯಂ ಸೇವಾ ಸಂಸ್ಥೆಗಳು ಕೇಂದ್ರ ಸರ್ಕಾರದ ಅನುದಾನದ ನೆರವಿನಿಂದ ನಡೆಸುತ್ತಿದ್ದು, ಹೊಸದಾಗಿ ವಸತಿಗೃಹ ಪ್ರಾರಂಭಿಸುವ ಸಂಸ್ಥೆಗಳು ತಮ್ಮ ಪ್ರಸ್ತಾವನೆ ಸಲ್ಲಿಸಬಹುದಾಗಿದೆ.  ಕಟ್ಟಡ ನಿರ್ಮಾಣದ ಶೇ. ೭೫ ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರವೇ ಭರಿಸುತ್ತದೆ.  ಆದರೆ ಕಟ್ಟಡವನ್ನು ಸಾರ್ವಜನಿಕ ಭೂಮಿಯಲ್ಲಿ ಮಾತ್ರ ಕಟ್ಟಬೇಕು.  ಬಾಡಿಗೆ ಕಟ್ಟಡದಲ್ಲಿ ಉದ್ಯೋಗಸ್ಥ ಮಹಿಳೆಯರ ವಸತಿಗೃಹ ನಡೆಸುವ ಸಂಸ್ಥೆಗಳಿಗೆ ಹಣಕಾಸಿನ ನೆರವು ನೀಡಲಾಗುವುದು.  ಅಲ್ಲದೆ ವಸತಿಗೃಹ ಪ್ರಾರಂಭದಲ್ಲಿ ಪ್ರತಿ ನಿವಾಸಿಗೆ ಪೀಠೋಪಕರಣಗಳ ಖರೀದಿಗಾಗಿ ೭೫೦೦ ರೂ. ಅನಾವರ್ತ ವೆಚ್ಚ ನೀಡಲಾಗುವುದು.  ಕಟ್ಟಡವನ್ನು ಸಾರ್ವಜನಿಕ ಭೂಮಿಯಲ್ಲಿ ನಿರ್ಮಿಸಲು ಕಾರ್ಪೊರೇಟ್ ಹೌಸಸ್‌ಗಳಿಗೆ ೫೦ : ೫೦ ಹೊಂದಾಣಿಕೆ ಅನುದಾನ ನೀಡಲಾಗುವುದು.  ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಆಸಕ್ತ ಅರ್ಹ ಸ್ವಯಂ ಸೇವಾ ಸಂಸ್ಥೆಯವರು ತಮ್ಮ ಪ್ರಸ್ತಾವನೆಯನ್ನು ಜ. ೧೦ ರ ಒಳಗಾಗಿ ಸಲ್ಲಿಸಬೇಕು.  ಹೆಚ್ಚಿನ ವಿವರಗಳನ್ನು ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಜಿಲ್ಲಾಡಳಿತ ಭವನ, ಕೊಪ್ಪಳ ಇವರನ್ನು ಸಂಪರ್ಕಿಸಬಹುದಾಗಿದೆ .
Please follow and like us:
error