ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ತರಬೇತಿ : ಅರ್ಜಿ ಆಹ್ವಾನ

ಕೊಪ್ಪಳ   : ಪ್ರಸಕ್ತ ಸಾಲಿನ ಸ್ವರ್ಣ ಜಯಂತಿ ಶಹರಿ ರೋಜಗಾರ್ ಯೋಜನೆಯಡಿ ಜಿಲ್ಲೆಯ ನಗರ ಪ್ರದೇಶಗಳಲ್ಲಿ ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳ ಯುವಕ-ಯುವತಿಯರಿಗಾಗಿ ವಿವಿಧ ತರಬೇತಿ ಪಡೆಯಲು ಅರ್ಜಿ ಆಹ್ವಾನಿಸಲಾಗಿದೆ.
  ಕೊಪ್ಪಳ ನಗರಸಭೆ ವ್ಯಾಪ್ತಿಯಲ್ಲಿ ೩ ತಿಂಗಳ ಅವಧಿಯ ಟೈಲರಿಂಗ್, ಪ್ಯಾಷನ್ ಡಿಸೈನ್, ಮೊಬೈಲ್ ರಿಪೇರಿ, ಎಲೆಕ್ಟ್ರಿಕಲ್ ಮತ್ತು ಹೋಮ್ ಅಪ್ಲೈನ್ಸಸ್, ಬಿಲ್ಡಿಂಗ್ ಕನ್ಸಟ್ರಕ್ಷನ್ ಮೆಟಿರಿಯಲ್ಸ್ ಮ್ಯಾಸಡ್ರಿ, ಎಲೆಕ್ಟ್ರಿಕಲ್ ವಯರಿಂಗ್, ಗ್ಲಾಜಡ್ ಟೈಲ್ಸ್, ಕ್ಲಾಡಿಟೈಲ್ಸ್, ಸೆಂಟರಿಂಗ್ ವರ್ಕ್, ಟೂ ವೀಲರ್ ಅಂಡ್ ಫೋರ್ ವೀಲರ್ ರಿಪೇರಿ, ಆಟೋ ಮೊಬೈಲ್ಸ್ ತರಬೇತಿ ನೀಡಲು ಉದ್ದೇಶಿಸಲಾಗಿದ್ದು, ಈ ತರಬೇತಿಗೆ ಸಾಕ್ಷರಸ್ಥರಾಗಿರುವ ಎಲ್ಲರು ಅರ್ಜಿ ಸಲ್ಲಿಸಬಹುದಾಗಿದೆ.  ಪಿ.ಯು.ಸಿ/ಐಟಿಐ/ಡಿಪ್ಲೋಮಾ ವ್ಯಾಸಂಗ ಮಾಡಿರುವವರಿಗೆ ೩ ತಿಂಗಳ ಅವಧಿಯ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ (ಬೇಸಿಕ್ ತರಬೇತಿ ಹೊಂದಿದವರಿಗೆ) ತರಬೇತಿ ಹಾಗೂ ಪಿ.ಯು.ಸಿ. ಉತ್ತೀರ್ಣರಾದವರಿಗೆ ೧ ತಿಂಗಳ ಫೋರ್ ವೀಲರ್ ಡ್ರೈವಿಂಗ್, ಬಸ್ ಡ್ರೈವಿಂಗ್ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.
  ಗಂಗಾವತಿ ನಗರಸಭೆ ವ್ಯಾಪ್ತಿಯಲ್ಲಿ ಸಾಕ್ಷರಸ್ಥರಾಗಿರುವ ಯುವಕ, ಯುವತಿಯರಿಗೆ ಮೂರು ತಿಂಗಳ ಅವಧಿಯ ಟೈಲರಿಂಗ್, ಪ್ಯಾಷನ್ ಡಿಜೈನ್, ಮೊಬೈಲ್ ರಿಪೇರಿ, ಎಲೆಕ್ಟ್ರಿಕಲ್ ಮತ್ತು ಹೋಮ್ ಅಪ್ಲೈಯನ್ಸಸ್, ಬೋರ್‌ವೆಲ್ ರಿಪೇರಿ, ಎಲೆಕ್ಟ್ರಿಕಲ್ ರಿವೈಂಡಿಂಗ್, ಮೋಟಾರ್ ರಿವೈಂಡಿಂಗ್, ಐ.ಪಿ. ಸೆಟ್ಸ್ ರಿಪೇರಿ, ಪೇಪರ್ ಪ್ಲೇಟ್ ಅಂಡ್ ಕಪ್ಸ್, ಕ್ಯಾರಿಬ್ಯಾಗ್, ಎನ್ವಲಪ್, ಗ್ರೀಟಿಂಗ್ ಕಾರ್ಡ್ಸ್, ಟೂ ವೀಲರ್ ಅಂಡ್ ಫೋರ್ ವೀಲರ್ ರಿಪೇರಿ, ರಕ್ಸಿನ್ ಸೀಟ್, ಕವರ್ ವರ್ಕ್ಸ್, ವೆಲ್ಡರ್, ಬ್ಲಾಕ್ ಸಿಮ್ಮಿತಿ ವರ್ಕ್ಸ್, ಟ್ರಾಕ್ಟರ್ ರಿಪೇರಿ, ಕಾರ್‌ಪೆಂಟರ್ ವರ್ಕ್ಸ್ ತರಬೇತಿ, ಪಿ.ಯು.ಸಿ/ಐಟಿಐ/ಡಿಪ್ಲೋಮಾ ವ್ಯಾಸಂಗ ಮಾಡಿರುವವರಿಗೆ ೩ ತಿಂಗಳ ಅವಧಿಯ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಹಾಗೂ ಪಿ.ಯು.ಸಿ. ಉತ್ತೀರ್ಣರಾದವರಿಗೆ ೧ ತಿಂಗಳ ಫೋರ್ ವೀಲರ್ ಡ್ರೈವಿಂಗ್ ತರಬೇತಿ ನೀಡಲಾಗುವುದು.
  ಕುಷ್ಟಗಿ ಪುರಸಭೆ ವ್ಯಾಪ್ತಿಯ ಸಾಕ್ಷರಸ್ಥರಾಗಿರುವವರಿಗೆ ೩ ತಿಂಗಳ ಅವಧಿಯ ಗ್ರಾನೈಟ್ ಕಟಿಂಗ್, ಅಂಡ್ ಪಾಲಿಶಿಂಗ್, ಸ್ಲೌರಿ ಯೂಸ್ಡ್ ಫಾರ್ ಬ್ರಿಕ್ಸ್ ಮ್ಯಾನುಪ್ರಾಕ್ಚರ್, ಪೇಪರ್ ಪ್ಲೇಟ್ ಅಂಡ್ ಕಪ್ಸ್, ಕ್ಯಾರಿಬ್ಯಾಗ್, ಎನ್ವಲಪ್, ಗ್ರೀಟಿಂಗ್ ಕಾರ್ಡ್ಸ್, ಪಿ.ಯು.ಸಿ/ಐಟಿಐ/ಡಿಪ್ಲೋಮಾ ವ್ಯಾಸಂಗ ಮಾಡಿರುವವರಿಗೆ ೩ ತಿಂಗಳ ಅವಧಿಯ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಹಾಗೂ ಪಿ.ಯು.ಸಿ. ಉತ್ತೀರ್ಣರಾದವರಿಗೆ ೧ ತಿಂಗಳ ಫೋರ್ ವೀಲರ್ ಡ್ರೈವಿಂಗ್ ತರಬೇತಿ ನೀಡಲಾಗುವುದು.
  ಯಲಬುರ್ಗಾ ಪಟ್ಟಣ ಪಂಚಾಯತ್ ವ್ಯಾಪ್ತಿಯ ಸಾಕ್ಷರಸ್ಥರಿಗೆ ಮೂರು ತಿಂಗಳ ಅವಧಿಯ ಟೈಲರಿಂಗ್, ಪ್ಯಾಷನ್ ಡಿಜೈನ್, ಮೊಬೈಲ್ ರಿಪೇರಿ, ಎಲೆಕ್ಟ್ರಿಕಲ್ ಮತ್ತು ಹೋಮ್ ಅಪ್ಲೈಯನ್ಸಸ್ ತರಬೇತಿ, ಪಿ.ಯು.ಸಿ/ಐಟಿಐ/ಡಿಪ್ಲೋಮಾ ವ್ಯಾಸಂಗ ಮಾಡಿರುವವರಿಗೆ ೩ ತಿಂಗಳ ಅವಧಿಯ ಕಂಪ್ಯೂಟರ್ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ತರಬೇತಿ ಹಾಗೂ ಪಿ.ಯು.ಸಿ. ಉತ್ತೀರ್ಣರಾದವರಿಗೆ ೧ ತಿಂಗಳ ಫೋರ್ ವೀಲರ್ ಡ್ರೈವಿಂಗ್ ತರಬೇತಿ ನೀಡಲಾಗುವುದು.
  ಅರ್ಜಿ ಸಲ್ಲಿಸಬಯಸುವವರು ಬಡತನ ರೇಖೆಗಿಂತ ಕೆಳಗಿರುವ ಕುಟುಂಬದವರಾಗಿರಬೇಕು, ವಯೋಮಿತಿ ೧೮ ರಿಂದ  ೩೫ ವರ್ಷದೊಳಗಿರಬೇಕು, ಕಡ್ಡಾಯವಾಗಿ ಆಯಾ ನಗರ, ಸ್ಥಳೀಯ ಸಂಸ್ಥೆ ವ್ಯಾಪ್ತಿಯ ನಿವಾಸಿಯಾಗಿರಬೇಕು.  ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ವಾಸ್ತವ್ಯ ದೃಢೀಕರಣ ಪತ್ರ ಸಲ್ಲಿಸಬೇಕು.  ಒಬ್ಬ ಅಭ್ಯರ್ಥಿಯು ಒಂದಕ್ಕಿಂತ ಹೆಚ್ಚಿನ ತರಬೇತಿಗೆ ಅರ್ಜಿ ಸಲ್ಲಿಸುವಂತಿಲ್ಲ.  ಅರ್ಜಿಯನ್ನು ಮೀಸಲಾತಿ, ವಿದ್ಯಾರ್ಹತೆ ಪ್ರಕಾರ ವಿಂಗಡಿಸಿ, ಆದ್ಯತೆ ಮೇರೆಗೆ ತರಬೇತಿ ನೀಡಲಾಗುವುದು.  ನಿಗದಿತ ಅರ್ಜಿಯನ್ನು ಆಯಾ ನಗರಸಭೆ, ಪುರಸಭೆ, ಪಟ್ಟಣ ಪಂಚಾಯತಿ ಕಚೇರಿಯಿಂದ ಪಡೆದು, ಭರ್ತಿ ಮಾಡಿದ ಅರ್ಜಿಯನ್ನು ಹದಿನೈದು ದಿನಗಳ ಒಳಗಾಗಿ ಆಯಾ ಸ್ಥಳೀಯ ಸಂಸ್ಥೆ ಕಚೇರಿಗೆ ಸಲ್ಲಿಸಬೇಕು.  ಅರ್ಜಿಯನ್ನು ವೆಬ್‌ಸೈಟ್ ತಿತಿತಿ.ಞoಠಿಠಿಚಿಟಛಿiಣಥಿ.gov.iಟಿ ನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

Leave a Reply