ವೀರಶೈವ ಪಂಚಮಸಾಲಿ ತಾಲೂಕ ಘಟಕಕ್ಕೆ ಅವಿರೋಧ ಆಯ್ಕೆ.

ಕೊಪ್ಪಳ-24- ಇತ್ತೀಚೆಗೆ ನಗರದ ಪಂಚಮಸಾಲಿ ನಿಯೊಜಿತ ಕಲ್ಯಾಣ ಮಂಟಪ ಕುಷ್ಠಗಿ ರಸ್ತೆ ಕೊಪ್ಪಳದಲ್ಲಿ ನಡೆದ ಸಭೆಯಲ್ಲಿ ವೀರಶೈವ ಪಂಚಮಸಾಲಿ ಕೊಪ್ಪಳ ತಾಲೂಕ ಘಟಕಕ್ಕೆ ಪದಾಧಿಕಾರಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ಕರಿಯಪ್ಪ ಸಕ್ರಪ್ಪ ಮೇಟಿ ಸಾ|| ಗಿಣಗೇರ, ಉಪಾಧ್ಯಕ್ಷರುಗಳಾಗಿ ಉಮೇಶ ಎತ್ತಿನಮನಿ ಸಾ|| ಮುದ್ಲಾಪೂರ, ಶರಣಪ್ಪ ಶಿವಪ್ಪ ಆನೆಗುಂದಿ, ಸಾ|| ಅಗಳಕೇರಾ, ಪ್ರಧಾನ ಕಾರ್ಯದರ್ಶಿಗಿ ಶರಣಪ್ಪ ಎಸ್ ಮೇಟಿ, ಸಾ|| ಓಜನಹಳ್ಳಿ, ಸಹ ಕಾರ್ಯದರ್ಶಿಯಾಗಿ ಯಮನೂರಪ್ಪ ನಾಗಪ್ಪ ಗಂಟಿ ಸಾ|| ಗಿಣಗೇರಾ, ಕೋಶಾಧ್ಯಕ್ಷರಗಿ ಕೆ. ವಿರುಪಾಕ್ಷಪ್ಪ ಬಸಪ್ಪ ಸಾ| ಕುಕನಪಳ್ಳಿ, ಇನ್ನುಳಿದ ೧೪ ಜನ ಸದಸ್ಯರುಗಳನ್ನೊಳಗೊಂಡ ಒಟ್ಟು ೨೧ ಪದಾಧಿಕಾರಿಗಳನ್ನು  ಅವಿರೋಧ ಆಯ್ಕೆ ಮಾಡಲಾಯಿತು.
    ಈ ಸಂಧರ್ಬದಲ್ಲಿ  ವೀರಣ್ಣ ಹಂಚಿನಾಳ, ಪಂಪಣ್ಣ್ಣ ಪಲ್ಲೆದ, ವೀರಣ್ಣ ಇಂದರಗಿ, ಈರಣ್ಣ ಚಾಕಲಬ್ಬಿ, ವೀರಣ್ಣ ಬಳಿಗೇರ, ವಿರುಪಾಕ್ಷಗೌಡ ಹಾಸಗಲ್ಲ ಇನ್ನುಳಿದ ಪಂಚಮಸಾಲಿ ಸಮಾಜದ ಮುಖಂಡರು ಉಪಸ್ಥಿತರಿದ್ದರು.
Please follow and like us:
error