ಕೊಪ್ಪಳ ಲೋಕಸಭಾ ಚುನಾವಣೆ : ದಿ.೨೧ ರಂದು ಸೈಯದ್ ಬೆಂಬಲಿಗರ ಸಭೆ

೧೬ ನೇಯ ಲೋಕಸಭೆಯ ಸಾರ್ವತ್ರಿಕ ಚುನಾವಣೆಗೆ ಬರುವ ಏ.೧೭ ರಂದು ಮತದಾನ ನಡೆಯಲಿದ್ದು ಈಗಾಗಲೆ ಚುನಾವಣೆ ಪ್ರಕ್ರೀಯೆ ಭರದಿಂದ ಸಾಗಿದ್ದು ಈ ಚುನಾವಣೆಯಲ್ಲಿ ಯಾವ ಪಕ್ಷಕ್ಕೆ ಬೆಂಬಲಿಸ ಬೇಕು ಎಂಬ ನಿರ್ಧಾರ ಕೈಗೊಳ್ಳಲು ದಿ.೨೧ ರಂದು ಸೈಯದ್ ಫೌಂಡೇಷನ್ ಮತ್ತು ಚಾರಿಟೆಬಲ್ ಟ್ರಸ್ಟ್‌ನ ಅಧ್ಯಕ್ಷರಾದ ಕೆ.ಎಂ ಸೈಯದ್ ಅವರ ಬೆಂಬಲಿಗರ ಸಭೆ ನಡೆಯಲಿದೆ.
ಕೆಜೆಪಿ ಪಕ್ಷ ಬಿಜೆಪಿಯಲ್ಲಿ ವಿಲೀನಗೊಂಡ ಬಳಿಕ ಕೆಜೆಪಿ ಪಕ್ಷದಲ್ಲಿದ್ದ ಕೆ.ಎಂ. ಸೈಯದ್ ರವರು ಈಗ ಯಾವ ಪಕ್ಷಕ್ಕೆ ಸೇರಬೇಕು ಲೋಕಸಭಾ ಚುನಾವಣೆಯಲ್ಲಿ ಯಾವ ಪಕ್ಷದ ಅಭ್ಯರ್ಥಿಗೆ ಬೆಂಬಲಿಸ ಬೇಕೆಂಬ ನಿರ್ಧಾರ ಕೈಗೊಳ್ಳಲು ಪೂರ್ವಭಾವಿಯಾಗಿ ಚರ್ಚಿಸಲು ಬೆಂಬಲಿಗರು ಮತ್ತು ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಣೆಗಾಗಿ ದಿ.೨೧ ರ ಶುಕ್ರವಾರ ಮಧ್ಯಾಹ್ನ ೨.೩೦ ಗಂಟೆ ಸುಮಾರಿಗೆ  ನಗರದ ಕಿತ್ತೂರು ರಾಣಿ ಚನ್ನಮ್ಮ ಸರ್ಕಲ್ ಬಳಿ ಇರುವ ಸೈಯದ್ ಫೌಂಡೇಷನ್ ಕಛೇರಿ ಸಭಾಂಗಣದಲ್ಲಿ  ಸಭೆ ಜರುಗಲಿದೆ.
ಕೊಪ್ಪಳ ಲೋಕಾಸಭಾ ಚುನಾವಣೆ ಪ್ರಯುಕ್ತದ ಕೆ.ಎಂ.ಸೈಯದ್ ರವರ ಬೆಂಬಲಿಗರು ಹಾಗೂ ಅಭಿಮಾನಿ ಕಾರ್ಯಕರ್ತರ ಈ ಮಹತ್ವದ ಪೂರ್ವಭಾವಿ ಸಿದ್ದತಾ ಸಭೆಗೆ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಮತ್ತು ಅಭಿಮಾನಿಗಳು ಪಾಲ್ಗೊಂಡು ಸಲಹೆ ಸೂಚನೆ ನೀಡಿ ಸಭೆ ಯಶಸ್ವಿಗೋಳಿಸಬೇಕೆಂದು ಅವರ ಆಪ್ತಕಾರ್ಯದರ್ಶಿ ಮಾರುತಿ ಮಾಗಳದ ರವರು ಪ್ರಕಟಣೆಯಲ್ಲಿ ತಿಳಿಸಿ ಸರ್ವರನ್ನು ಸ್ವಾಗತಿಸಿದ್ದಾರೆ.

Leave a Reply