ಅಂಚೆ ಪತ್ರ ಚಳವಳಿಯ ಮೂಲಕ ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಕೆಗಾಗಿ ಸರ್ಕಾರಕ್ಕೆ ಮನವಿ.

ಕೊಪ್ಪಳ,ಜ.೨೫ ರಾಜ್ಯದಾದ್ಯಂತ ಹಲವಾರು ವರ್ಷಗಳಿಂದ ಸ.ಪ್ರ.ದ.ಕಾಲೇಜುಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ದಿಷ್ಠಾವದಿ ಧರಣಿಯನ್ನು ಇಂದು ೧೪ ನೇ ದಿನವು ನಡೆಯುತ್ತಿದ್ದು, ಈವರೆಗೂ ಸರ್ಕಾರವಾಗಲಿ,ಸಂಬಂಧಿಸಿದ ಇಲಾಖೆಯಾಗಲಿ ಎಳ್ಳಷ್ಟು ಸ್ಪಂದಿಸುತ್ತಿಲ್ಲ ಕಾರಣ ಇಂದು ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಪತ್ರ ಚಳವಳಿಯ ಮೂಲಕ ವಿನೂತನ ಪ್ರತಿಭಟನೆಯನ್ನು ಮಾಡಿ ಸರ್ಕಾರಕ್ಕೆ ಆಗ್ರಹಿಸಿದರು.
Please follow and like us:
error