ಗುರುಪಾದಯ್ಯ ಪಿ.ಸಾಲಿಮಠ ಅಧ್ಯಕ್ಷರಾಗಿ ಅವಿರೋಧ ಆಯ್ಕೆ

ಕೊಪ್ಪಳ,ಫೆ.೨೭: ನಗರದ ಪ್ರತಿಷ್ಠಿತ ಶ್ರೀ ವೀರಮಹೇಶ್ವರ ಪತ್ತಿನ ಸಹಕಾರಿ ಸಂಘ ನಿ. ಕೊಪ್ಪಳ ಇದರ ಅಧ್ಯಕ್ಷರಾಗಿ ಗುರುಪಾದಯ್ಯ ಪಿ.ಸಾಲಿಮಠ ಹಾಗೂ ಉಪಾಧ್ಯಕ್ಷರಾಗಿ ಕೆ.ವಿ. ಕಲ್ಯಾಣಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ವೀರಮಹೇಶ್ವರ ಪತ್ತಿನ ಸಹಕಾರಿ ಸಂಘ ನಿ. ಚುನಾವಣಾಧಿಕಾರಿ ಕೆ. ವೀರಭದ್ರಚಾರಿ ತಿಳಿಸಿದ್ದಾರೆ.
ಬುಧುವಾರ ಸಂಘದ ಕಾರ್ಯಾಲಯದಲ್ಲಿ ನಡೆದ ಆಯ್ಕೆ ಪ್ರಕ್ರೀಯೆಯಲ್ಲಿ ಬ್ಯಾಂಕಿನ ಸರ್ವ ಸದಸ್ಯರು, ಸಿ.ವಿ. ಕಲ್ಮಠ, ಆರ್.ಎಸ್. ಹಿರೇಮಠ, ಜಿ.ಜಿ. ಹಿರೇಮಠ ಸೇರಿದಂತೆ ಸಮಾಜದ ಹಿರಿಯರು ಹಾಗೂ ಗಣ್ಯರ ಸಮಕ್ಷಮದಲ್ಲಿ ಅವಿರೋಧ ಆಯ್ಕೆಗೊಂಡಿದ್ದಾರೆ.

Leave a Reply