ಇಂದು ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರದ ಉದ್ಘಾಟನೆ

 ಕುಷ್ಟಗಿ : ಶ್ರೀಗೂತ್ತುರ ಗ್ರಾಮದ ಶ್ರೀಮಾರುತೇಶ್ವರ ಜಾತ್ರಾ ಮಹೋತ್ಸವದ ಅಂಗವಾಗಿ ನ.೨೬ ರಂದು ಸಮೀಪದ ಬೇವೂರ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಏರ್ಪಡಿಸಲಾಗಿದೆ.
ಡಾ.ಶ್ರೀ ಕಾಂತ ಬಾಸೂರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳು ಉಚಿತ ಕಣ್ಣಿನ ತಪಾಸಣೆ ಮತ್ತು ಶಸ್ತ್ರ ಚಿಕಿತ್ಸೆ ಶಿಬಿರವನ್ನು ಉದ್ಘಾಟಿಸುವರು.
ಡಾ.ಜಯಲಕ್ಷ್ಮೀ ನೇಕಾರ ಕಾರ್ಯಕ್ರಮದ ಅಧ್ಯಕ್ಷತೆವಹಿಸುವರು. ಹುಬಳ್ಳಿಯ ಖ್ಯಾತ ನೇತ್ರ ತಜ್ಞ ಡಾ.ಎಂ.ಎಂ ಜೋಷಿ, ಎಸ್.ಕೆ ದೇಸಾಯಿ ವ್ಯವಸ್ಥಾಪಕರು ಜಿಲ್ಲಾ ಅಂಧತ್ವ ನಿವಾರಣಾ ಸಂಘ, ಜಿಲ್ಲಾ ಪಂಚಾಯ್ತಿ ಸದಸ್ಯ ಅಶೋಕ ತೋಟದ, ತಾಲೂಕು ಪಂಚಾಯ್ತಿ ಸದಸ್ಯ ಮಲ್ಲನಗೌಡ ಕೋನನಗೌಡರ, ದಿನಾಂಕ ಡಾ|| ಎಂ. ಎಂ. ಜೋಷಿ ನೇತ್ರ ವಿಜ್ಞಾನ ಸಂಸ್ಥೆ, ಹುಬ್ಬಳ್ಳಿಡಾ|| ಪ್ರಶಾಂತ ಬಾಬು ತಾಲೂಕು ಆರೋಗ್ಯ ಅಧಿಕಾರಿಗಳು, ಜಿಲ್ಲಾ ಪಂಚಾಯತ್ ಸದಸ್ಯ ಅಶೋಕ ತೋಟದ, ತಾ. ಪಂ. ಸದಸ್ಯ ಮಲ್ಲನಗೌಡ್ರ ಕೋನನಗೌಡ್ರ, ಗ್ರಾ. ಪಂ. ಅಧ್ಯಕ್ಷ ಬಸವರಾಜ ಪೂಜಾರ,ಗ್ರಾ. ಪಂ. ಉಪಾಧ್ಯಕ್ಷೆ ದೇವಮ್ಮ ಕರಡಿ, ಎ.ಪಿ.ಎಮ್.ಸಿ. ಅಧ್ಯಕ್ಷ ಮಾನಪ್ಪ ಪೂಜಾರ, ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಶರಣಗೌಡ ಪಾಟೀಲ್, ಬ್ಲಾಕ್ ಕಾಂಗ್ರೇಸ್ ಭೀಮೆಶಪ್ಪ ಹಳ್ಳಿ, ಬಾ.ಸ.ಪ.ಪೂ. ಕಾಲೇಜ್ ಚಂದ್ರಶೇಖರ ಮೇಟಿ, ಡಾ|| ಮಂಜುನಾಥ ಸಜ್ಜನ್ ಕಾರ್ಯಕ್ರಮದಲ್ಲಿ ಭಾಗವಹಿಸುವರು ಎಂದು ಶಿಬಿರ ವ್ಯವಸ್ಥಾಪಕ ಬಸವರಾಜ ಪಲ್ಲೇದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ..

Leave a Reply