ಸಾರಿಗೆ ಇಲಾಖೆಯಿಂದ ಚಾಲನಾ ತರಬೇತಿ : ಅರ್ಜಿ ಆಹ್ವಾನ

 ಸಾರಿಗೆ ಇಲಾಖೆಯಿಂದ ಪರಿಶಿಷ್ಟ ಜಾತಿಯ ಅಭ್ಯರ್ಥಿಗಳಿಗೆ ಎಸ್.ಸಿ.ಪಿ. (ವಿಶೇಷ ಘಟಕ ಯೋಜನೆ) ಯಲ್ಲಿ ವಿವಿಧ ವಾಹನ ಚಾಲನಾ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ.

        ಆಟೋರೀಕ್ಷಾ ಕ್ಯಾಬ್ ತರಬೇತಿಗೆ ೦೫ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಅರ್ಜಿ ಸಲ್ಲಿಸಲು ಆಟೋರಿಕ್ಷಾ ಸಾರಿಗೆತರ ಚಾಲನಾ ಅನುಜ್ಞಾ ಪತ್ರ ಪಡೆದು ಒಂದು ವರ್ಷ ಪೂರ್ಣವಾಗಿರಬೇಕು, ೮ನೇ ತರಗತಿ ಉತ್ತೀರ್ಣರಾಗಿರಬೇಕು. ಲಘು ಮೋಟಾರು ವಾಹನ (ಎಲ್.ಎಮ್.ವಿ.) ಈ ತರಬೇತಿಗೆ ಒಟ್ಟು ೨೮ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು.  ಭಾರಿ ಸಾರಿಗೆ ವಾಹನ ತರಬೇತಿಗೆ ೦೭ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಿದ್ದು, ಅರ್ಜಿ ಸಲ್ಲಿಸಲು ಎಲ್.ಎಮ್.ವಿ. ಸಾರಿಗೇತರ ಚಾಲನಾ ಅನುಜ್ಞಾ ಪತ್ರ ಪಡೆದ ಒಂದು ವರ್ಷ ಪೂರ್ಣವಾಗಿರಬೇಕು, ೮ನೇ ತರಗತಿ ಉತ್ತೀರ್ಣರಾಗಿರಬೇಕು.  ಮೇಲ್ಕಂಡ ಎಲ್ಲ ವಾಹನ ಚಾಲನಾ ತರಬೇತಿಗೆ ಆಯ್ಕೆಯಾದ ಫಲಾನುಭವಿಗಳು ತರಬೇತಿಗೆ ತಗಲುವ ವೆಚ್ಚದ ಶೇ.೨೫ ಮೊತ್ತವನ್ನು ಭರಿಸಬೇಕು.  ತರಬೇತಿಗಾಗಿ ಅರ್ಜಿ ಸಲ್ಲಿಸಲು ಜುಲೈ ೩೧ ಕೊನೆಯ ದಿನವಾಗಿರುತ್ತದೆ. ಹೆಚ್ಚಿನ ಮಾಹಿತಿಗಾಗಿ ಕೊಪ್ಪಳ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಕಛೇರಿಯನ್ನು ಸಂಪರ್ಕಿಸಬಹುದಾಗಿದೆ .
Please follow and like us:
error