You are here
Home > Koppal News > ಜನಮನ ಸೆಳೆದ ಸಂಗೀತ ಕಾರ್ಯಕ್ರಮ

ಜನಮನ ಸೆಳೆದ ಸಂಗೀತ ಕಾರ್ಯಕ್ರಮ

ಕೊಪ್ಪಳ : ಪಂಡಿತ ಪುಟ್ಟರಾಜ ಗವಾಯಿಗಳ 97ನೇ ಜನ್ಮದಿನದ ಅಂಗವಾಗಿ ಕೊಪ್ಪಳದಲ್ಲಿ ಇದೇ ತಿಂಗಳ 26ರಂದು ಸಂಜೆ ಸಂಗೀತ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಣ್ಣ ಉಳಿತಾಯ , ಲಾಟರಿ ಹಾಗೂ ಗ್ರಂಥಾಲಯ ಇಲಾಖೆಯ ಸಚಿವ ಶಿವನಗೌಡನಾಯಕ್ ಕಾರ್ಯಕ್ರಮ ಉದ್ಘಾಟಿಸಿದರು. ಮಳೆಯ ಕಾಟ, ಕಣ್ಣಾಮುಚ್ಚಾಲೆ ಆಡಿದ ವಿದ್ಯುತ್ , ತಡವಾಗಿ ಆರಂಭವಾದ ಕಾರ್ಯಕ್ರಮ ಒಟ್ಟಿನಲ್ಲಿ ಹಲವಾರು ಅಡೆ ತಡೆಗಳ ನಡುವೆ ಕಾರ್ಯಕ್ರಮ ನಡೆದು ಜನಮನ ಸೂರೆಗೊಂಡಿತು. ಅಂತರಾಷ್ಟ್ರೀಯ ಖ್ಯಾತಿಯ ರಿಂಪಾ ಶಿವಾ ಇವರ ತಬಲಾವಾದನಕ್ಕೆ ಎಲ್ಲರೂ ತಲೆದೂಗಿದರು. ಕಾರ್ಯಕ್ರಮದಲ್ಲಿ ಜಿಲ್ಲೆಯ ಶಾಸಕರು,ವಿಧಾನ ಪರಿಷತ್ ಸದಸ್ಯರು ಹಾಗೂ ಗಣ್ಯರು ಭಾಗವಹಿಸಿದ್ದರು. ಡಾ.ಪಂಡಿತ ಪುಟ್ಟರಾಜ ಗವಾಯಿ ಜನ್ಮದಿನಾಚರಣೆ ಸಮಿತಿ ಅಧ್ಯಕ್ಷ ಬಿ.ಎಸ್.ಪಾಟೀಲ ,ಸಮಿತಿಯ ಉಪಾಧ್ಯಕ್ಷ ಆರ್.ಐ.ಪಾನಘಂಟಿ, ಪ್ರಧಾನ ಕಾರ್ಯದರ್ಶಿ ಸದಾಶಿವ ಪಾಟೀಲ ಇನ್ನಿತರರು ಈ ಕಾರ್ಯಕ್ರಮ ನಡೆಸಿಕೊಟ್ಟರು.

Leave a Reply

Top