ಲೋಕಸಭೆ ಚುನಾವಣೆ : ಕಂಟ್ರೋಲ್ ರೂಂ ಸ್ಥಾಪನೆ

 ಲೋಕಸಭೆ ಸಾರ್ವತ್ರಿಕ ಚುನಾವಣೆಗೆ ಸಂಬಂಧಿಸಿದ ದೂರುಗಳು ಹಾಗೂ ಅಹವಾಲುಗಳನ್ನು ಸ್ವೀಕರಿಸಲು ಮತ್ತು ಚುನಾವಣೆಗೆ ಸಂಬಂಧಿತ ಯಾವುದೇ ಮಾಹಿತಿ ಒದಗಿಸಲು ಅನುಕೂಲವಾಗುವಂತೆ ಜಿಲ್ಲಾ ಚುನಾವಣಾಧಿಕಾರಿಗಳ ಕಚೇರಿಯಲ್ಲಿ ಕಂಟ್ರೋಲ್ ರೂಂ ಸ್ಥಾಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ. ಮೋಹನ್‌ರಾಜ್ ಅವರು ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ದಿನದ ೨೪ ಗಂಟೆ ಕಾರ್ಯ ನಿರ್ವಹಿಸುವ  ಕಂಟ್ರೋಲ್ ರೂಂ ಸ್ಥಾಪಿಸಲಾಗಿದ್ದು, ಕಂಟ್ರೋಲ್ ರೂಂನ ದೂರವಾಣಿ ಸಂಖ್ಯೆ: ೦೮೫೩೯-೨೨೫೦೦೨ ಆಗಿದೆ.  ಕಂಟ್ರೋಲ್ ರೂಂನಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾ ಜಲಾನಯನ ಅಧಿಕಾರಿ ಮಲ್ಲಿಕಾರ್ಜುನ, ಭೂದಾಖಲೆಗಳ ಇಲಾಖೆ ಅಧೀಕ್ಷಕ ದೊಡ್ಡಮನಿ, ಬೆರಳಚ್ಚುಗಾರ ಸಂತೋಷ್  ಅವರನ್ನಿ ನಿಯೋಜಿಸಲಾಗಿದೆ.  ಕಂಟ್ರೋಲ್ ರೂಂನಲ್ಲಿ ಸಾ

ರ್ವಜನಿಕರಿಂದ ಬಂದ ದೂರುಗಳನ್ನು ದೂರು ವಹಿಯಲ್ಲಿ ದಾಖಲಿಸಿ ಸಂಬಂಧಿಸಿದ ಅಧಿಕಾರಿಗಳಿಗೆ ಮಾಹಿತಿ ನೀಡುವುದು ಹಾಗೂ ನಿಗದಿತ ನಮೂನೆಯಲ್ಲಿ ಪ್ರತಿದಿನದ ಮಾಹಿತಿಯನ್ನು ಜಿಲ್ಲಾಧಿಕಾರಿಗಳ ಗಮನಕ್ಕೆ ತರುವಂತೆ ಸೂಚನೆ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಪಿ.ಮೋಹನ್‌ರಾಜ್ ಅವರು ತಿಳಿಸಿದ್ದಾರೆ.

Leave a Reply