ಜೂ.೨೮ ರಂದು ಗಂಗಾವತಿಯಲ್ಲಿ ರಫ್ತು ಜಾಗೃತಿ ಕಾರ್ಯಕ್ರಮ

 ವಿಶ್ವೇಶ್ವರಯ್ಯ ಕೈಗಾರಿಕಾ ವ್ಯಾಪಾರ ಕೇಂದ್ರ, ಬೆಂಗಳೂರು, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ, ಗಂಗಾವತಿ ತಾಲೂಕ ರೈಸ್ ಮಿಲ್ಲರ್‍ಸ್ ಅಸೋಸಿಯೇಶನ್ ಹಾಗೂ ಫೆಡರೇಶನ್ ಆಫ್ ಇಂಡಿಯನ್ ಎಕ್ಸಪೋರ್ಟ್ ಆರ್ಗನೈಜೇಶನ್ ಬೆಂಗಳೂರು ಇವರ ಸಂಯುಕ್ತ ಆಶ್ರಯದಲ್ಲಿ ರಫ್ತು ಜಾಗೃತಿ ಕಾರ್ಯಕ್ರಮವನ್ನು ಗಂಗಾವತಿಯ ರೈಸ್ ಮಿಲ್ಲರ್‍ಸ್ ಅಸೋಸಿಯೇಶನ್ ಸಭಾಂಗಣದಲ್ಲಿ ಜೂ.೨೮ ರಂದು ಬೆಳಿಗ್ಗೆ ೧೦ ಗಂಟೆಗೆ ಹಮ್ಮಿಕೊಳ್ಳಲಾಗಿದೆ. 
  ಕಾರ್ಯಕ್ರಮದಲ್ಲಿ ಹಾಲಿ ರಫ್ತುದಾರ ಸಂಸ್ಥೆಗಳ ಮಾಲಕರು, ಪಾಲುದಾರರು, ನೌಕರರು ಅಲ್ಲದೇ ಹೊಸದಾಗಿ ರಫ್ತು ವ್ಯವಹಾರ ಪ್ರಾರಂಭಿಸಬೇಕೆಂದು ಯೋಚಿಸುತ್ತಿರುವವರೆಲ್ಲರೂ ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಹುದು. ತರಬೇತಿಯ ಕಾಲಕ್ಕೆ ರಫ್ತು ವ್ಯವಹಾರ ಏಕೆ? ಹೇಗೆ? ಎಲ್ಲಿಗೆ? ಹಾಗೂ ನಮ್ಮ ಜಿಲ್ಲೆಯಿಂದ ಯಾವ ಯಾವ ಸಾಮಗ್ರಿಗಳನ್ನು ರಫ್ತು ಮಾಡಬಹುದು ಎಂಬ ಇತ್ಯಾದಿ ವಿವರಗಳಲ್ಲದೇ, ರಫ್ತು ನಿರ್ವಹಣೆಯಲ್ಲಿ ವಿವಿಧ ಹೆಜ್ಜೆಗಳ ಕುರಿತು ತಾಂತ್ರಿಕ ಅಧಿವೇಶನಗಳನ್ನು ನಡೆಸಲಾಗುವುದು. 
ಈ ತರಬೇತಿ ಶಿಬಿರದಲ್ಲಿ ಪಾಲ್ಗೊಳ್ಳಬಯಸುವವರು ಜಂಟಿ ನಿರ್ದೇಶಕರು, ಜಿಲ್ಲಾ ಕೈಗಾರಿಕಾ ಕೇಂದ್ರ ಕೊಪ್ಪಳ ದೂರವಾಣಿ ಸಂಖ್ಯೆ: ೦೮೫೩೯-೨೩೧೫೪೮, ವಿಐಟಿಸಿ ಧಾರವಾಡ ಕಛೇರಿ (೦೮೩೬-೨೨೨೨೬೦೦) ಅಥವಾ ಮುರಳಿ ದೀಕ್ಷಿತ ಯೋಜನಾ ನಿರ್ವಾಹಕರು, ವಿಐಟಿಸಿ (ಮೊ.೮೧೪೭೯೩೩೯೫೩) ಇವರನ್ನು ಸಂಪರ್ಕಿಸಬಹುದಾಗಿದೆ ಎಂದು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕರು   ತಿಳಿಸಿದ್ದಾರೆ. 
Please follow and like us:
error