You are here
Home > Koppal News > ದಲಿತರ ಕೇರಿಗೆ ಕಾಂಗ್ರೆಸ್ (ಪ.ಜಾ) ವಿಭಾಗದ ಜಿಲ್ಲಾಧ್ಯಕ್ಷರ ಭೇಟಿ

ದಲಿತರ ಕೇರಿಗೆ ಕಾಂಗ್ರೆಸ್ (ಪ.ಜಾ) ವಿಭಾಗದ ಜಿಲ್ಲಾಧ್ಯಕ್ಷರ ಭೇಟಿ

 ಗಂಗಾವತಿ ತಾಲೂಕಿನ ಕನಕಗಿರಿ ಕ್ಷೇತ್ರಕ್ಕೆ ಒಳಪಡುವ ಇಚನಾಳ ಗ್ರಾಮದಲ್ಲಿ ಕಳೆದ ಹಲವು ದಿನಗಳಿಂದ ದಲಿತರಿಗೆ ಸವರ್ಣೀಯರು ಕುಡಿಯುವ ನೀರಿನ ಭಾವಿಗೊಸ್ಕರ ಬಹಿಷ್ಕಾರ ಹಾಕಿದ್ದು ಇರುತ್ತದೆ. ಸದರಿ ವಿಷಯಕ್ಕೆ ಸಂಬಂಧಿಸಿದಂತೆ ದಲಿತರ ಸಮಸ್ಯೆಗಳನ್ನು ಮತ್ತು ಪ್ರಕರಣದ ಮಾಹಿತಿಗಳನ್ನು ತಿಳಿಯಲು ಕಾಂಗ್ರೇಸ್ ಪಕ್ಷದ ಪ.ಜಾ. ವಿಭಾಗದ ಜಿಲ್ಲಾಧ್ಯಕ್ಷರಾದ ಗಾಳೆಪ್ಪ ಹೆಚ್ ಪೂಜಾರ ಇವರ ನೇತೃತ್ವದಲ್ಲಿ ದೀಡಿರನೇ ಬೇಟಿ ನೀಡಿ ಆ ಗ್ರಾಮದಲ್ಲಿ ಸವರ್ಣೀಯರಿಂದ ಇರುವ ತೊಂದರೆಗಳನ್ನಿ ಆಲಿಸಿ ಮುಂದಿನ ದಿನಗಳಲ್ಲಿ ದಲಿತರಿಗೆ ಸಿಗಬೇಕಾದ ಸಾಮಾಜಿಕ ನ್ಯಾಯ ಸಮ್ಮತವಾದ ಜೀವನವನ್ನು ನಡೆಸಲಿಕ್ಕೆ ಬೇಕಾದ ಎಲ್ಲಾ ಮೂಲಭುತ ಅವಶ್ಯಕತೆಗಳನ್ನು ಒದಗಿಸಿಕೊಡುವುದಾಗಿ ಭರವಸೆ ನೀಡಿದರು.
                                       ಈ ಸಂದರ್ಭದಲ್ಲಿ ದಲಿತ ಮುಖಂಡರಾದ ಮರಿಯಪ್ಪ ಯತ್ನಟ್ಟಿ, ಪ್ರಕಾಶ ಪೂಜಾರ, ಮರಿಯಪ್ಪ ಪೂಜಾರ, ಪ್ರಭುರಾಜ ಬೊಚನಹಳ್ಳಿ, ಮಾರುತಿ ಸಿಂದೋಗಿ, ವೆಂಕಟೇಶ, ಲಕ್ಷ್ಮಣ ಬಗನಾಳ, ಫಕ್ಕೀರಪ್ಪ ದೊಡ್ಡಮನಿ,ಮಲ್ಲಿಕಾರ್ಜುನ ಪೂಜಾರ  ಇನ್ನು ಅನೇಕರು ಹಾಜರಿದ್ದರು .

Leave a Reply

Top