ರಾಜ್ಯ ಕ.ಸಾ.ಪ.ಕಾರ್ಯದರ್ಶಿಯಾಗಿ ಬಾದವಾಡಗಿ ನೇಮಕ:ಹರ್ಷ

ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಸಮಿತಿಯ ಗೌರವ ಕಾಂiiದರ್ಶಿಯನ್ನಾಗಿ ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲ್ಲೂಕಿನ ಜುಮಲಾಪುರ ಗ್ರಾಮದ ಸಾಹಿತಿ ಸಂಗಮೇಶ ಬಾದವಾಡಗಿಯವರನ್ನು ನೇಮಕ ಮಾಡಿರುವದಕ್ಕೆ ಕೊಪ್ಪಳ ಜಿಲ್ಲಾ ಕ.ಸಾ.ಪ.ನಿಕಟಪೂರ್ವ ಅಧ್ಯಕ್ಷ ಶೇಖರಗೌಡ ಮಾಲಿಪಾಟೀಲ,ನಿಕಟಪೂರ್ವ ಗೌರವ ಕೋಶಾಧ್ಯಕ್ಷ ರಾಜಶೇಖರ ಅಂಗಡಿ ಮತ್ತಿತರರು ಹರ್ಷವ್ಯಕ್ತ ಪಡಿಸಿದ್ದಾರೆ.
ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯಲ್ಲಿ ಅಧಿಕಾರಿಯಾಗಿ ಸೇವೆ ಸಲ್ಲಿಸಿ ಇದೀಗ ಸ್ವಯಂ ನಿವೃತ್ತಿ ಪಡೆದು ಬೆಂಗಳೂರಿನಲ್ಲಿ ನೆಲೆಸಿರುವ ಸಂಗಮೇಶ ಬಾದವಾಡಗಿ ಅನೇಕ ಸಾಹಿತ್ಯ ಕೃತಿಗಳನ್ನು ರಚಿಸಿ ಹೆಸರು ಮಾಡಿದ್ದಾರೆ. ‘ಸರಕಾರಿ ನೌಕರಿಯಲ್ಲಿ ಸಾಹಿತ್ಯ ಸ್ಪಂದನೆ’ ಎಂಬ ಕೃತಿಯ ಮೂಲಕ ರಾಜ್ಯದ ಸಾವಿರಾರು ಸರಕಾರಿ ನೌಕರ ಬರಹಗಾರರನ್ನು ಪರಿಚಯಿಸುವ ಮಹತ್ವದ ಕೆಲಸ ಮಾಡಿದ್ದಾರೆ.ಹಲವಾರು ಬಾರಿ ವಿದೇಶ ಪ್ರವಾಸಗಳನ್ನು ಕೈಗೊಂಡು ಹೊರದೇಶಗಳಲ್ಲಿಯೂ ಕನ್ನಡದ ಮಹತ್ವ ಸಾರುವ ಸಾಂಸ್ಕೃತಿಕ ಚಟುವಟಿಕೆಗಳನ್ನು ಮಾಡಿರುವ ಬಾದವಾಡಗಿಯವರನ್ನು ಕುಷ್ಟಗಿ ತಾಲ್ಲೂಕು ಹನುಮನಾಳದಲ್ಲಿ ನಡೆದ ೫ ನೇ ತಾಲ್ಲೂಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಮೂಲಕ ಗೌರವಿಸಲಾಗಿದೆ.
ಇಂತಹ ಕನ್ನಡ ನುಡಿ ಸೇವಕನ ಸಾಧನೆ ಗುರುತಿಸಿ ಇದೀಗ ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿರುವ ಕ.ಸಾ.ಪ.ಅಧ್ಯಕ್ಷ ಪುಂಡಲೀಕ ಹಾಲಂಬಿಯವರ ಕ್ರಮವನ್ನು ಸಾಹಿತಿಗಳಾದ ವಿಠ್ಠಪ್ಪ ಗೋರಂಟ್ಲಿ, ಡಾ.ಮಹಾಂತೇಶ ಮಲ್ಲನಗೌಡರ,ಡಾ.ವಿ.ಬಿ.ರಡ್ಡೇರ,ಫ.ಹ.ವಜ್ರಬಂಡಿ,ಎಸ್.ಬಿ.ಗೊಂಡಬಾಳ, ತಾಲ್ಲೂಕು  ಕ.ಸಾ.ಪ. ನಿಕಟಪೂರ್ವ ಅಧ್ಯಕ್ಷರುಗಳಾದ ರವೀಂದ್ರ ಬಾಕಳೆ,ಜಿ.ಎಸ್.ಗೋನಾಳ,ಈಶಪ್ಪ ಮಳಗಿ,ಲಿಂಗಾರೆಡ್ಡಿ ಆಲೂರು, ಅಮರೇಶ ಮೈಲಾಪೂರ,ಸೋಮಶೇಖರ ಹರ್ತಿ,ರಾಮಣ್ಣ ತಳವಾರ,ಮಾನಪ್ಪ ಪೂಜಾರ,ದೇವೇಂದ್ರಪ್ಪ ಜಿರಲಿ,ಮೆಹಬೂಬ ಕನಕಗಿರಿ ,ಶಿವು ಯಲಬುರ್ಗಿ,ಕೆ.ಆರ್.ಕುಲಕರ್ಣಿ,ಶಿವಲಿಂಗಪ್ಪ ಪಟ್ಟೇದ,ಕೊಟ್ರಪ್ಪ ಗಡಗಿ,ಫಕ್ಕೀರಪ್ಪ ವಾಲ್ಮೀಕಿ,ಬಸವರೆಡ್ಡಿ ಆಡೂರ,ಶಂಕ್ರಯ್ಯ ಅಬ್ಬಿಗೇರಿಮಠ,ಮಂಜುನಾಥ ಡಿ.ಡೊಳ್ಳಿನ ಮತ್ತಿತರರು ಸ್ವಾಗತಿಸಿದ್ದಾರೆ.

Please follow and like us:
error