fbpx

ವಿಶ್ವ ಏಡ್ಸ್ ದಿನ : ಡಿ. ೧೨ ರಂದು ಕೊಪ್ಪಳದಲ್ಲಿ ಜಾಥಾ

: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಜಿಲ್ಲಾ ಏಡ್ಸ್ ತಡೆಗಟ್ಟುವಿಕೆ ಮತ್ತು ನಿಯಂತ್ರಣ ಘಟಕದ ವತಿಯಿಂದ ವಿಶ್ವ ಏಡ್ಸ್ ದಿನದ ಅಂಗವಾಗಿ ಡಿ. ೧೨ ರಂದು ಕೊಪ್ಪಳ ನಗರದಲ್ಲಿ ಜನಜಾಗೃತಿ ಜಾಥಾ ಕಾರ್ಯಕ್ರಮ ಹಮ್ಮಿಕೊಂಡಿದೆ.
     ಜಾಥಾವು ಅಂದು ಬೆಳಿಗ್ಗೆ ೮ ಗಂಟೆಗೆ ಕೊಪ್ಪಳ ಜಿಲ್ಲಾ ಆಸ್ಪತ್ರೆ ಆವರಣದಿಂದ ಹೊರಟು, ಅಶೋಕ ವೃತ್ತ, ಜವಾಹರ ರಸ್ತೆ ಮಾರ್ಗವಾಗಿ ಸಿಂಪಿಲಿಂಗಣ್ಣ ರಸ್ತೆ, ಬಸ್‌ಸ್ಟ್ಯಾಂಡ್ ಮೂಲಕ ಪುನಃ ಜಿಲ್ಲಾ ಆಸ್ಪತ್ರೆ ಆವರಣವರೆಗೆ ಸಾಗಿ ಬರಲಿದೆ.  ಈ ಜಾಥಾ ಕಾರ್ಯಕ್ರಮದ ಯಶಸ್ವಿಗೆ ಸರ್ವರೂ ಸಹಕರಿಸುವಂತೆ ಜಿಲ್ಲಾ ಏಡ್ಸ್ ನಿಯಂತ್ರಣಾಧಿಕಾರಿಗಳು  ಕೋರಿದ್ದಾರೆ.

Please follow and like us:
error

Leave a Reply

error: Content is protected !!