You are here
Home > Koppal News > ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ್ ಜುಮ್ಮಣ್ಣವರ್ ಆಯ್ಕೆ

ಜಿಲ್ಲಾ ಅಧ್ಯಕ್ಷರಾಗಿ ನಾಗರಾಜ್ ಜುಮ್ಮಣ್ಣವರ್ ಆಯ್ಕೆ

 ನೌಕರರ ಸಂಘ ಚುನಾವಣೆ :  
 ಅತ್ಯಂತ ಜಿದ್ದಾಜಿದ್ದಿನ ಕಣವಾಗಿದ್ದ ರಾಜ್ಯ ಸರ್ಕಾರಿ ನೌಕರರ ಸಂಘದ ಚುನಾವಣೆಯಲ್ಲಿ ಕೊಪ್ಪಳ ಜಿಲ್ಲಾ ಅಧ್ಯಕ್ಷರಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ನಾಗರಾಜ್ ಜುಮ್ಮಣ್ಣವರ್ ಅವರು ಆಯ್ಕೆಯಾಗಿದ್ದಾರೆ.
  ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ, ರಾಜ್ಯ ಪರಿಷತ್ ಸದಸ್ಯ ಹಾಗೂ ಖಜಾಂಚಿ ಸ್ಥಾನಗಳಿಗಾಗಿ ಸೋಮವಾರ ರಾಜ್ಯ ಸರ್ಕಾರಿ ನೌಕರರ ಭವನದಲ್ಲಿ ನಡೆದ ಚುನಾವಣೆಯಲ್ಲಿ ನಾಗರಾಜ್ ಜುಮ್ಮಣ್ಣವರ್ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದು, ಶಂಭುಲಿಂಗನಗೌಡ ಹಲಗೇರಿ ಅವರು ಸೋಲು ಅನುಭವಿಸಿದ್ದಾರೆ.   ಚುನಾವಣಾ ಫಲಿತಾಂಶದ ವಿವರ ಇಂತಿದೆ.  ನಾಗರಾಜ್ ಜುಮ್ನನ್ನವರ್ ಅವರು ೫೨ ಮತಗಳನ್ನು ಗಳಿಸಿದರೆ, ಶಂಭುಲಿಂಗನಗೌಡ ಅವರು ೧೩ ಮತಗಳನ್ನು ಪಡೆದಿದ್ದಾರೆ.  ರಾಜ್ಯ ಪರಿಷತ್ ಸದಸ್ಯ ಸ್ಥಾನಕ್ಕೆ ಧನಂಜಯ್ ಮಾಲಗಿತ್ತಿ ಅವರು ೫೫ ಮತಗಳನ್ನು ಪಡೆದು ಆಯ್ಕೆಯಾಗಿದ್ದು, ಕಮಲಾನಾಯಕ್ ಅವರು ೧೦ ಮತಗಳನ್ನು ಗಳಿಸಿ ಸೋಲುಂಡಿದ್ದಾರೆ.  ಖಜಾಂಚಿ ಸ್ಥಾನಕ್ಕೆ ಸುಶೀಲೇಂದ್ರರಾವ್ ಅವರು ೫೫ ಮತಗಳನ್ನು ಗಳಿಸಿ ಆಯ್ಕೆಯಾಗಿದ್ದು, ರಾಜಶೇಖರ ಪಾಟೀಲ್ ಅವರು ೧೦ ಮತಗಳನ್ನು ಪಡೆದು ಸೋಲು ಅನುಭವಿಸಿದ್ದಾರೆ.  ಹೆಚ್.ಎಸ್. ಸಂಗಟಿ, ಬಿ.ಎ. ಅತ್ತಾರ್, ನರಸಿಂಗರಾವ್, ಶ್ರೀನಿವಾಸ್ ಅವರು ಚುನಾವಣೆ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದರು ಎಂದು ಚುನಾವಣಾಧಿಕಾರಿ ಎನ್.ವೈ. ಕಾಡಗಿ  ತಿಳಿಸಿದ್ದಾರೆ.

Leave a Reply

Top