ಸಾಹಿತ್ಯ ಪ್ರಶಸ್ತಿಗೆ ಕೃತಿಗಳ ಆಹ್ವಾನ

ಕೊಪ್ಪಳ ಆ. ೧೦ : ಕನ್ನಡ ಪುಸ್ತಕ ಪ್ರಾಧಿಕಾರ ಮತ್ತು ತಿರುಳ್ಗನ್ನಡ ಸಾಹಿತ್ಯ ಪ್ರತಿಷ್ಠಾನ ಇವರು ಜಂಟಿಯಾಗಿ ಲೇಖಕರನ್ನು ಮತ್ತು ಸಾಹಿತಿಗಳನ್ನು ಪ್ರೋತ್ಸಾಹಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಸಾಹಿತಿಗಳ ಕೃತಿಗಳಿಗೆ ಆ. ೨೪, ೨೫ ಹಾಗೂ ೨೬ ರಂದು ನಡೆಯಲಿರುವ ಕೊಪ್ಪಳ ಜಿಲ್ಲಾ ಉತ್ಸವದಲ್ಲಿ ರುಕ್ಮಿಣಿಬಾಯಿ ಸ್ಮಾರಕ ಸಾಹಿತ್ಯ ಪ್ರಶಸ್ತಿ ನೀಡಲು ಕೃತಿಗಳನ್ನು ಆಹ್ವಾನಿಸಲಾಗಿದೆ.
೨೦೧೦ ರಿಂದ ೨೦೧೧ರಲ್ಲಿ ಪ್ರಕಟವಾದ ಎಲ್ಲ ಪ್ರಕಾರದ ಸಾಹಿತ್ಯ ಕೃತಿಗಳನ್ನು ಪ್ರಶಸ್ತಿಗೆ ಪರಿಗಣಿಸಲಾಗುವುದು. ಆಸಕ್ತರು ತಮ್ಮ ಪ್ರಕಟಿತ ಮೂರು ಕೃತಿಗಳು, ಇತ್ತೀಚಿನ ೨ ಭಾವಚಿತ್ರ ಹಾಗೂ ಸಂಪೂರ್ಣ ಮಾಹಿತಿಯೊಂದಿಗೆ ನಂ. ೨೪, ಸಿ.ಎಂ.ಸಿ. ಕಾಂಪ್ಲೆಕ್ಸ್, ಸರಕಾರಿ ಆಸ್ಪತ್ರೆ ಹತ್ತಿರ ಕೊಪ್ಪಳ-೫೮೩೨೩೧ ಮೊ: ೯೯೦೨೨೨೫೮೩೬, ೯೫೩೮೮೨೫೧೭೩ ಈ ವಿಳಾಸಕ್ಕೆ ಕಳುಹಿಸಲು ಕನ್ನಡ ಪುಸ್ತಕ ಪ್ರಾಧಿಕಾರದ ಜಿಲ್ಲಾ ಪ್ರತಿನಿಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply