ರಾಷ್ಟ್ರೀಯ ಬಸವದಳ ಹಾಗೂ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾ- ೬೫ ನೇ ಗಣರಾಜ್ಯೋತ್ಸವ ದಿನಾಚರಣೆ

ಕೊಪ್ಪಳ : ಕೊಪ್ಪಳ ನಗರದ ಕಿನ್ನಾಳ ರಸ್ತೆಯ ರೇಲ್ವೆ ಗೆಟಿನ ಹತ್ತಿರ ವಿರುವ ಶ್ರೀ ಗುರು ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ (ರಿ) ಹಾಗೂ ಜಿಲ್ಲಾ ಲಿಂಗಾಯತ ಧರ್ಮ ಮಹಾಸಭಾದ ವತಿಯಿಂದ  ಎಲ್ಲಾ ಸದಸ್ಯರು ಪದಾಧಿಕಾರಿಗಳು ಶಾಲಾ ವಿದ್ಯಾರ್ಥಿಗಳು ೬೫ ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು. 
೬೫ ನೇ ಗಣರಾಜ್ಯೋತ್ಸವದ ದ್ವಜಾರೋಹಣ ಮಾಡಿದ ಶರಣ ಬಸವನಗೌಡ್ರ ಪೊಲೀಸ್ ಪಾಟೀಲರು  ಎಲ್ಲಾ ಶರಣರನ್ನು ಉದ್ದೇಶಿಸಿ ದೇಶದ ವ್ಯವಸ್ಥಿತ ಆಡಳಿತ ನಿರ್ವಹಣೆಗಾಗಿ ಸಂವಿಧಾನ ರಚನೆಯ ಅವಶ್ಯಕತೆ ಇದ್ದುದ್ದರಿಂದ ಡಾ.ಬಿ.ಆರ್ ಅಂಬೆಡ್ಕರ್ ರವರು ವಿವಿಧ ದೇಶಗಳ  ಸಂವಿಧಾನವನ್ನು  ಅಭ್ಯಾಸಿಸಿ, ಆಳವಾದ ಅಧ್ಯಯನ ನಡೆಸಿ ಅಂತಿಮವಾಗಿ  ನವೆಂಬರ್  ೨೬ ೧೯೪೯ ರಂದು ಭರತದ ಕರಡು ಸಂವಿಧಾನವನ್ನು ಮಂಡಿಸಿದರು. ಈ ಸಂವಿಧಾನವನ್ನು ಆಗಿನ ರಾಜಕಿಯ ನೇತಾರರು, ವಿದ್ವಾಂಸರು ಹಾಗೂ ಕಾನೂನು ತಜ್ಞರು ಪರಿಶೀಲಿಸಿ ಕೊನೆಗೆ ಜನೆವರಿ ೨೬ ೧೯೫೦ ರಂದು ಜಾರಿಗೆ ತಂದರು ಅಂತೆಯೆ ಡಾ.ಬಿ.ಆರ್ ಅಂಬೇಡ್ಕರವರನ್ನು ಸಂವಿಧಾನ ಶಿಲ್ಪಿ ಎಂದು ಕರೆಯುತ್ತೆವೆ. ೨೬ ನೇ ಜನೆವರಿ ೧೯೫೦ ರಂದು ಗಣರಾಜ್ಯೋತ್ಸವ ದಿನವೆಂದು ಆಚರಿಸುತ್ತಾ

ಇಂದು ೬೫ ನೇ ಗಣರಾಜ್ಯೋತ್ಸವನ್ನು ಆಚರಿಸುತ್ತಿದ್ದೆವೆ  ಎಂದು ವಿವಿರಿಸಿದರು.  

ನಮ್ಮದು ಪ್ರಜಾ ರಾಜ್ಯ ಅಂದರೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಪ್ರಜಯೆ ಆಡಳಿತ ನಡೆಸುವ ರಾಜ್ಯ ಆದ್ದರಿಂದ ನಾವು ಈ ದಿನವನ್ನು ಪ್ರಜಾರಾಜ್ಯೋತ್ಸವ ದಿನವೆಂದು ಆಚರಿಸುತ್ತಾ ಬಂದಿದ್ದೆವೆ. ಇದು ಜಾತ್ಯಾತೀತ  ಸಮಾಜದ ಸಂವಿಧಾನ ಆದ್ದರಿಂದ ನಮ್ಮ ಭಾರತ ಸಂವೀಧಾನದ ತತ್ವ ಸಿದ್ದಾಂತ ಕಾನೂನು ನಿಯಮಗಳ ಪರಿಪಾಲನೆಯನ್ನು ಭಾರತೀಯ ಪ್ರತಿಯೊಬ್ಬ ಪ್ರಜೆ ಅಳವಡಿಸಿಕೊಂಡಾಗ ಮಾತ್ರ ಗಣ ರಾಜ್ಯೋತ್ಸವದ ಆಚರಣೆಗೆ ಬೆಲೆ ಬರುತ್ತದೆ.  ಈ ಸಮಾಜದ ಸಮಾರಂಭದಲ್ಲಿ  ರಾಷ್ಟ್ರೀಯ ಬಸವದಳದ ಕಾರ್ಯಧ್ಯಕ್ಷರಾದ ಶರಣ ವೀರಣ್ಣನವರು, ಅದ್ಯಕ್ಷರಾದ ಶರಣ ಸತೀಶ ಮಂಗಳೂರು, ಶರಣ ಸುಂಕಪ್ಪ ಅಮರಾಪೂರ, ಶಿವಬಸವಯ್ಯ ವೀರಾಪೂರ, ಈಶ್ವರ ಲಿಂಗಾಯತ, ಶಂಕ್ರಪ್ಪ ಗೊಂದಕರ್,  ರಾಜು ಬರ‍್ಮದೆ, ನೀಲಪ್ಪ ಪಡತಪ್ಪನವರ, ಲಿಂಗನಗೌಡ ಪೊಲೀಸಪಾಟೀಲ, ಹಾಗೂ ಶರಣೆಯರಾದ ಶಂಕ್ರಮ್ಮ ಗಡಾದ, ಶರಣಮ್ಮ ಪೊಲೀಸಪಾಟೀಲ, ಜಯದೇವಿ ಪಾಟೀಲ, ಪಾಲಾಕ್ಷ್ಮ್ಮ ಅಂಗಡಿ, ಕಸ್ತೂರೆಮ್ಮ ಕೊಟಗಿ, ರೇಣುಕಮ್ಮ ಗಾದಾರಿ, ನೀಲಮ್ಮ ಯತ್ನಟ್ಟಿ, ಶ್ರೀದೇವಿ ಗಾದಾರಿ, ವಿಜಯಲಕ್ಷ್ಮೀ ಲಿಂಗಾಯತ ಮುಂತಾದವರು ಭಾಗವಹಿಸಿದ್ದರು.  

Leave a Reply