fbpx

ನಗರದ ಬಸವ ಮಂಟಪದಲ್ಲಿ ೬೬ ನೇ ಗಣರಾಜ್ಯೋತ್ಸವ ದಿನಾಚರಣೆ

ಕೊಪ್ಪಳ : ಜ.೨೬ : ನಗರದ ಕಿನ್ನಾಳ ರಸ್ತೆಯಲ್ಲಿರುವ ಬಸವ ಮಂಟಪದಲ್ಲಿ ರಾಷ್ಟ್ರೀಯ ಬಸವದಳ, ಲಿಂಗಾಯತ ಧರ್ಮ ಮಹಾಸಭಾ ಹಾಗೂ ಕ್ರಾಂತಿ ಗಂಗೋತ್ರಿ ಅಕ್ಕ ನಾಗಲಾಂಬಿಕಾ ಮಹಿಳಾ ಗಣದ ಸರ್ವ ಪದಾಧಿಕಾರಿಗಳು ಹಾಗೂ ಸದಸ್ಯರು ೬೬ ನೇ ಗಣರಾಜ್ಯೋತ್ಸವವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಲಾಯಿತು. 
ಧ್ವಜಾರೋಹಣವನ್ನು ನೆರವೇರಿಸಿದ ಶರಣ ಸತೀಶ ಮಂಗಳೂರು ಇವರು ಎಲ್ಲರನ್ನು ಉದ್ದೇಶಿಸಿ ಮಾತನಾಡುತ್ತಾ ೧೫ ನೇ ಅಗಷ್ಠ ೧೯೪೭ ರಂದು ಭಾರತವು ಸ್ವತಂತ್ರವಾದ ನಂತರ ಭಾರತವು ಅನೇಕ ಸಮಸ್ಯೆ ಮತ್ತು ಸವಾಲುಗಳನ್ನು ಎದುರಿಸಬೇಕಾಯಿತು. ದೇಶದ ಸುವ್ಯವಸ್ಥೆ ಆಡಳಿತ ನಿರ್ವಾಹಣೆಗಾಗಿ ಕಾನೂನು ಮತ್ತು ಸಂವಿಧಾನದ ರಚನೆಯ ಅವಶ್ಯಕತೆ ಇತ್ತು. ಸಂವೀಧಾನ ರಚನೆ ಸಭೆಯ ರಾಷ್ಟ್ರೀಕ್ಕೆ ಸಂಬಂಧಿಸಿದ ವಿಷಯಗಳನ್ನು ಪರಿಶೀಲಿಸಲು ರಚಿಸಲಾದ ಅನೇಕ ಉಪ ಸಮಿತಿಗಳಲ್ಲಿ ಕರುಡು ಸಮಿತಿ ಪ್ರಮುಖವಾದುದು. ಡಾ.ಬಿ.ಆರ್.ಅಂಬೇಡ್ಕರ್ ರವರು ಈ ಕರಡು ಸಮಿತಿಗೆ ಅಧ್ಯಕ್ಷರಾಗಿದ್ದರು ಅನೇಕ ವಿಷಯಗಳ ಬಗ್ಗೆ ಚರ್ಚೆ ನಡೆಸಿ ತಯಾರಿಸಿದ ಕರಡು ಸಂವಿಧಾನವು ಅಂತಿಮವಾಗಿ ನವೆಂಬರ್ ೨೬ ೧೯೪೯ ರಂದು ಅಂಗಿಕರಿಸಲ್ಪಟ್ಟು ಮುಂದೆ ಜನೇವರಿ ೨೬ ೧೯೫೦ ರಂದು ಜಾರಿಗೆ ಬಂದಿತು. ಆದ್ದರಿಂದ ಈ ದಿನವನ್ನು ಗಣರಾಜ್ಯೋತ್ಸವದ ದಿನವನ್ನಾಗಿ ಆಚರಿಸಲಾಗುತ್ತಿದೆ.
 ದೇಶದ ನಾಗರಿಕರಲ್ಲಿ ಆಧ್ಯಾತ್ಮದ ಅರಿವು ಇಲ್ಲದ್ದರಿಂದ ನಮ್ಮ ದೇಶವು ಭ್ರಷ್ಠಾಚಾರ, ಅತ್ಯಾಚಾರ, ಕೊಲೆ, ಸುಲಿಗೆ, ಮೋಸ, ವಂಚನೆ, ಭಯೋತ್ಪಾದನೆ  ಇತ್ಯಾದಿ ಅನೇಕ ಮಾರ್ಗಗಳತ್ತ ಜನರು ಸಾಗುತ್ತಿದ್ದಾರೆ ಇದು ಸಮಾಜಕ್ಕೆ ಒಳ್ಳೆಯ ಬೆಳವಣಿಗೆಯಲ್ಲ. ಪ್ರತಿಯೊಬ್ಬ ಪ್ರಜೆಯೂ ನಮ್ಮ ಸಂವಿಧಾನದಲ್ಲಿಯ ನಿಯಮಗಳನ್ನು ಪಾಲಿಸುತ್ತಾ ಹೋದರೆ ಅರಾಜಕತೆ ಶೋಷಣೆ ಉಂಟಾಗಲಾರದು ಪ್ರತಿಯೊಬ್ಬರು ನನ್ನ ರಾಷ್ಟ್ರವೆಂದು ತಿಳಿದು ಪ್ರ್ರಾಮಾಣಿಕತೆಯಿಂದ ಸೇವೆ ಸಲ್ಲಿಸುತ್ತಾ ಜೀವಿಸಿದರೆ ಗಣರಾಜ್ಯೋತ್ಸವದ ದಿನಾಚರಣೆಗೆ ಅತ್ಯಂತ ಮಹತ್ವ ಬರುತ್ತದೆ ಎಂದು ನುಡಿದರು. 
ಕೊನೆಯದಾಗಿ ಮುಂದೆ ಜಾತಿ, ಜನಗಣತಿಯೂ ಜಾತ್ಯಾತೀತ  ಸಮಾಜಕ್ಕೆ ವಿರುದ್ದವಾದುದು. ಆದರೂ ನಮ್ಮ ಸರಕಾರವು ನಡೆಸುತ್ತಿರುವ ಜಾತಿ ಜನಗಣತಿಯಲ್ಲಿ ಎಲ್ಲಾ ಲಿಂಗಾಯತ ಹಾಗೂ ಬಸವಾಭಿಮಾನಿಗಳು ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ಜಾತಿ ಕಾಲಂನಲ್ಲಿ ಉಪ ಜಾತಿಗಳಾದ ಗಾಣಿಗ, ಕುಂಬಾರ, ಮಡಿವಾಳ, ಸಾದರು, ಹಡಪದ, ಎಂದು ಉಪ ಜಾತಿಗಳ ಹೆಸರನ್ನು ಬರೆಸಲು ಕಳಕಳಿಯಿಂದ ಕರೆಕೊಟ್ಟರು. 
ಈ ಸಂದರ್ಭದಲ್ಲಿ ಶರಣರಾದ ಬಸವನಗೌಡ್ರ ಪೊಲೀಸಪಾಟೀಲ, ನಂದಯ್ಯ ಹಿರೇಮಠ, ಚಂದ್ರಶೇಖರ ಕೊಟಗಿ, ಸುಂಕಪ್ಪ ಅಮರಾಪುರ, ಈಶಪ್ರಭು ಅಂಗಡಿ, ಈಶ್ವರಪ್ಪ ಕಡೆಮನಿ, ರುದ್ರೇಶ್ ಗೊಶಿ,  ಶಂಕ್ರಪ್ಪ ಗೊಂದಕರ್, ಅಮರೇಗೌಡ ಪಾಟೀಲ, ಶರಣೆಯರಾದ ವಿಜಯಲಕ್ಷ್ಮೀ.ಈ ಲಿಂಗಾಯತ, ರೇಣುಕಾ ಗಾಧಾರಿ, ಸರಸ್ವತೆಮ್ಮ ವಂದಲಿ, ಶಾಂತಮ್ಮ ಕವಲೂರು, ಶಂಕ್ರಮ್ಮ ಗೊಂಡಬಾಳ, ವೀರಮ್ಮ ಹಿರೇಮಠ, ಕಸ್ತೂರಮ್ಮ ಕೊಟಗಿ, ವಚನಾಮೃತ ಇನ್ನೂ ಅನೇಕ ಶರಣ ಶರಣೆಯರು ಉಪಸ್ಥಿತರಿದ್ದರು. 
ಸ್ವಾಗತವನ್ನು ಶರಣ ಈಶ್ವರ ಲಿಂಗಾಯತ, ವಂದನಾರ್ಪಣೆಯನ್ನು ಶರಣ ಮಂಜುನಾಥ ಗೊಸಿ ನಿರ್ವಹಿಸಿದರು. 
Please follow and like us:
error

Leave a Reply

error: Content is protected !!