ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕು – ರಾಘವೇಂದ್ರ ಹಿಟ್ನಾಳ್

 ವಿದ್ಯಾರ್ಥಿಗಳು ರಾಷ್ಟ್ರ್ರ ಕಟ್ಟುವಲ್ಲಿ ಮುಂದಾಗಬೇಕು. ಗುಣಾತ್ಮಕ ಶಿಕ್ಷಣ ಪಡೆದುಕೊಳ್ಳುವದರಿಂದ ಅದು ಸಾಧ್ಯ. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಕ್ರಿಯಾಶೀಲರಾಗಬೇಕೆಂದು ಮಾನ್ಯ ಶಾಸಕರು ಹಾಗೂ ಕಾಲೇಜು ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ  ರಾಘವೇಂದ್ರ ಹಿಟ್ನಾಳ್ ನುಡಿದರು. ಅವರು  ನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ೬೫ ನೆ ಗಣರಾಜ್ಯೋತ್ಸವ ದಿನಾಚರಣೆಯ ನಿಮಿತ್ಯ  ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಮುಂದುವರೆದು  ಅನೇಕ ಮಹಾ ಚೇತನಗಳ ಆದರ್ಶಗಳು ಯುವಕರಿಗೆ ಮಾದರಿಯಾಗಬೇಕು. ಪ್ರಾಚಾರ್ಯ ತಿಮ್ಮಾರೆಡ್ಡಿ ಮೇಟಿ ಮಾತನಾಡಿ ಭ್ರಷ್ಟಾಚಾರ ಈ ದೇಶದ ಪಿಡುಗು. ಭ್ರಷ್ಟಾಚಾರ ರಹಿತ ಆಡಳಿತದಿಂದ ಜನ ಸೇವೆ ಸಾಧ್ಯವೆಂದರು. ಉಪನ್ಯಾಸಕರಾದ ಮಹೇಶ ಮಮದಾಪುರ, ಪ್ರಭುರಾಜ ನಾಯಕ್, ಸುರೇಶ ಸೊನ್ನದ, ಡಾ. ಡಿ.ಎಚ್. ನಾಯಕ್, ದ್ವಾರಕಸ್ವಾಮಿ, ಗಾಯತ್ರಿ ಭಾವಿಕಟ್ಟಿ, ಶೋಭಾ ಹಾಗೂ ಅತಿಥಿ ಉಪನ್ಯಾಸಕ ವೃಂದ, ಶಿಕ್ಷಕೇತರ ಸಿಬ್ಭಂದಿ, ವಿದ್ಯಾರ್ಥಿ ಉಪಸ್ಥಿತರಿದ್ದರು.  

Leave a Reply