You are here
Home > Koppal News > ಸರಕಾರಿ ಪ್ರೌಢ ಶಾಲೆ ಭಾಗ್ಯನಗರದಲ್ಲಿ ಸೈಕಲ್ ವಿತರಣೆ

ಸರಕಾರಿ ಪ್ರೌಢ ಶಾಲೆ ಭಾಗ್ಯನಗರದಲ್ಲಿ ಸೈಕಲ್ ವಿತರಣೆ

ಕೊಪ್ಪಳ : ದಿ  ೨೫  ರಂದು ಸ.ಪ.ಪೂ.ಕಾಲೇಜು (ಪ್ರೌ.ಶಾಲಾವಿಭಾಗ) ಭಾಗ್ಯನಗರದಲ್ಲಿ ೮ನೇ ತರಗತಿಯ ವಿಧ್ಯಾರ್ಥಿಗಳಿಗೆ ಉಚಿತ ಸೈಕಲ್ ವಿತರಣಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತಿಯ ಅಧ್ಯಕ್ಷರಾದ ಹೊನ್ನೂರಸಾಬ ಬೈರಾಪೂರ ವಹಿಸಿದ್ದರು,
     ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ ಸದಸ್ಯರಾದ ಶ್ರೀಮತಿ ವನಿತಾ.ವಿ.ಗಡಾದ ಇವರು ವಹಿಸಿದ್ದರು ಅತಿಥಿಸ್ಥಾನವನ್ನು ತಾಲೂಕ ಪಂಚಾಯತ ಸದಸ್ಯರಾದ ದಾನಪ್ಪ ಕವಲೂರು , ಶ್ರೀನಿವಾಸ ಹ್ಯಾಟಿ ಇವರು ವಹಿಸಿದ್ದರು. ಹಾಗೂ ಗ್ರಾ.ಪಂ ಸದಸ್ಯೆ ಸರಸ್ವತಿ ಕೃಷ್ಣ, ಎಸ್.ಡಿ.ಎಮ್.ಸಿ ಅಧ್ಯಕ್ಷರಾದ ವೀರಪ್ಪ ಎಸ್ ಚಳ್ಳಾರಿ ಸದಸ್ಯರಾದ ಅಬ್ಬುಲ್ ರಶೀದ, ಶ್ರೀನಿವಾಸ ಬಗಾಡೆ, ಬಸವರಾಜ ಹುಬ್ಬಳ್ಳಿ, ಶ್ರೀಮತಿ ಲಲಿತಾ ರೋಣದ ಉಪಾಧ್ಯಕ್ಷರು ಎಸ್.ಡಿ.ಎಮ್.ಸಿ. ಶ್ರೀಮತಿ ಸಂಗೀತಾ ಬಡಿಗೇರ, ಶಾರದಾ ಮುಂತಾದವರು ಉಪಸ್ಥಿತರಿದ್ದರು. ಈ ಕಾರ್ಯಕ್ರಮದಲ್ಲಿ ಉಪಪ್ರಾಚಾರ್ಯರಾದ ಶ್ರೀಮತಿ ಸುಜಾತ, ಹಿರಿಯ ಶಿಕ್ಷಕರಾದ ಸುರೇಂದ್ರಗೌಡ ಪಾಟೀಲ್ ಹಾಗೂ ಇನ್ನೂ ಮುಂತಾದ ಶಿಕ್ಷಕವೃಂದದವರು ಭಾಗವಹಿಸಿದ್ದರು.  ಈ ಕಾರ್ಯಕ್ರಮದ ನಿರೂಪಣೆಯನ್ನು ಶಿಕ್ಷಕರಾದ ಎಂ. ಎಂ ಮುಜುಗೊಂಡ ನಿರೂಪಿಸಿದರು. ಶಿಕ್ಷಕಿಯಾದ ಶ್ರೀಮತಿ ಭಾರತಿ ಬೀರದಾರ ಇವರು ವಂದಿಸಿದರು.

Leave a Reply

Top