ಎಪ್ರೀಲ್ ೪ ಗುರುವಾರರಂದು ಗುರುಸ್ಮರಣೋತ್ಸವ

ಶ್ರೀಗವಿಮಠದಲ್ಲಿ 
ಕೊಪ್ಪಳ: ಸಂಸ್ಥಾನ ಶ್ರೀಗವಿಮಠದಲ್ಲಿ ದಿನಾಂಕ ೦೪-೦೪-೨೦೧೩ ರ ಗುರುವಾರದಂದು  ಶ್ರೀ ಮ.ನಿ.ಪ್ರ.ಜ.ಲಿಂ.ಶ್ರೀಶಿವಶಾಂತವೀರ ಮಹಾಶಿವಯೋಗಿಗಳ ಪುಣ್ಯ ಸ್ಮರಣೋತ್ಸವ  ಜರುಗಲಿದೆ. ಅಂದು ಬೆಳಿಗ್ಗೆ  ೬.೩೦ ಗಂಟೆಗೆ ಶ್ರೀಗವಿಸಿದ್ಧೇಶ್ವರ ಮಹಾಸ್ವಾಮಿಗಳ ನೇತೃತ್ವದಲ್ಲಿ ಶ್ರೀಮಳೆಮಲ್ಲೇಶ್ವರ ದೇವಸ್ಥಾದಿಂದ ಶ್ರೀಗವಿಮಠದವರೆಗೆ ಪಾದಯಾತ್ರೆ ನಡೆಯುತ್ತದೆ. ಬೆಳಿಗ್ಗೆ ೯.೩೦ ರಿಂದ ಸಾಯಂಕಾಲ ೫.೦೦ ಗಂಟೆಯವರೆಗೆ  ಶ್ರೀಗವಿಸಿದ್ಧೇಶ್ವರ ಆಯುರ್ವೇದ ಮಹಾವಿದ್ಯಾಲಯ ಹಾಗೂ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಶ್ರೀಗವಿಮಠದ ಆವರಣದಲ್ಲಿ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರ ಹಮ್ಮಿಕೊಂಡಿದೆ. ಬೆಳಿಗ್ಗೆ ೧೦.೩೦ ಗಂಟೆಗೆ  ಯಾತ್ರಿ ನಿವಾಸದ ಹತ್ತಿರ ( ಹರ್ಬಲ್ ಗಾರ್ಡನ್) ಲಿಂ ಶ್ರೀಮತಿ ಚನ್ನಬಸಮ್ಮ ಗುರುಶಿದ್ದಪ್ಪ  ಕೊತಬಾಳ ಇವರ ಸ್ಮರಣಾರ್ಥ ದಾನಿಗಳಾದ  ಶ್ರೀವಿ.ಜಿ.ಕೊತಬಾಳ ವಕೀಲರು ಹಾಗೂ ಮಕ್ಕಳು ಇವರಿಂದ ವೃದ್ಧಾಶ್ರಮ  ಕಟ್ಟಡದ ಭೂಮಿಪೂಜೆ ನಡೆಯಲಿದೆ. ಇದರಲ್ಲಿ ಗದಗ ನಗರದ ಜೀವನ ಸಂಧ್ಯಾಶ್ರಮ ವೃದ್ಧಾಶ್ರಮದ ಶ್ರೀಮತಿ ಮಣಿಬಾಯಿ ಷಾ ಭಾಗವಹಿಸಲಿದ್ದಾರೆ. ಅಂದು ಸಾಯಂಕಾಲ ೬.೩೦ ಕ್ಕೆ  ಶ್ರೀಗವಿಮಠದ ಕೈಲಾಸಮಂಟಪದಲ್ಲಿ ಗುರುಸ್ಮರಣೆ ಕಾರ್ಯಕ್ರಮ ಜರುಗುತ್ತದೆ. ಶ್ರೀ.ಮ.ನಿ.ಪ್ರ.ಪ್ರಭುಚನ್ನಬಸವ ಮಹಾಸ್ವಾಮಿಗಳು ಮೋಟಗಿಮಠ ಅಥಣಿ ಹಾಗೂ ಶ್ರೀಷ.ಬ್ರ.ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿಗಳು ಬೃಹನ್ಮಠ ಹೆಬ್ಬಾಳ ಭಾಗವಹಿಸಲಿರುವರು.  ಅತಿಥಿಗಳಾಗಿ ಶ್ರೀ ಈಶ್ವರ ಚಂದ್ರ ವಿದ್ಯಾಸಾಗರ ಪೋಲೀಸ್ ವರಿಷ್ಠಾಧಿಕಾರಿಗಳು ಬಾಗಲಕೋಟೆ ಹಾಗೂ ಶ್ರೀಕೃಷ್ಣಾನಂದ ಶಾಸ್ತ್ರೀಗಳು ಕಜ್ಜಿಡೋಣಿ ಆಗಮಿಸಲಿದ್ದಾರೆ. ಪಂ.ಎಂ.ವೆಂಕಟೇಶಕುಮಾರ ಅಂತಾರಾಷ್ಟ್ರೀಯ ಕಲಾವಿದರು ಧಾರವಾಡ ಇವರಿಂದ ಸುಗಮ ಸಂಗೀತವಿದೆ. ಸದ್ಭಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕು. ಹಾಗೇ ಉಚಿತ ಆರೋಗ್ಯ ತಪಾಸಣೆ ಹಾಗೂ ಚಿಕಿತ್ಸಾ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕೆಂದು ಶ್ರೀ ಗವಿಮಠದ ಪ್ರಕಟಣೆ ತಿಳಿಸಿದೆ.

Related posts

Leave a Comment