ಗಣಿ ಲಂಚ ಹಗರಣ ಸಿಬಿಐ ತನಿಖೆಗೆ ಸಿಇಸಿ ಶಿಫಾರಸು

 : ಬಿಎಸ್‌ವೈಗೆ ಮತ್ತೊಂದು ಹಿನ್ನಡೆ
ಹೊಸದಿಲ್ಲಿ,ಎ.20: ಬಿ.ಎಸ್.ಯಡಿ ಯೂರಪ್ಪ ಮುಖ್ಯಮಂತ್ರಿಯಾಗಿ ದ್ದಾಗ ಅವರ ಕುಟುಂಬ ಸದಸ್ಯರು ಮಾಲಕರಾಗಿರುವ ಎರಡು ಸಂಸ್ಥೆ ಗಳಿಗೆ ಗಣಿಗಾರಿಕಾ ಕಂಪೆನಿ ಯೊಂದು ದೊಡ್ಡ ಮೊತ್ತದ ದೇಣಿಗೆ ಗಳನ್ನು ಪಾವತಿ ಮಾಡಿರುವ ಬಗ್ಗೆ ಸಿಬಿಐ ತನಿಖೆಗೆ ಆದೇಶಿಸಬೇಕೆಂದು ಸುಪ್ರೀಂಕೋರ್ಟ್‌ನ ಉನ್ನತಾಧಿ ಕಾರದ ಪರಿಸರ ಸಮಿತಿ (ಸಿಇಸಿ)ಯು ಶುಕ್ರವಾರ ಶಿಫಾರಸು 
ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆಯಲ್ಲಿರುವ ಸ್ವಗೃಹದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪರಿಂದ ಪತ್ರಿಕಾಗೋಷ್ಠಿ.
ಮಾಡಿದೆ. ಯಡಿಯೂರಪ್ಪ ತನ್ನ ಅಧಿಕಾರಾವಧಿಯಲ್ಲಿ ರಾಜ್ಯದಲ್ಲಿ ಅಕ್ರಮ ಗಣಿಗಾರಿಕೆಗೆ ಅನುಮತಿ ನೀಡುವ ಮೂಲಕ ತನ್ನ ಕುಟುಂಬ ಸದಸ್ಯರು ‘ಭರ್ಜರಿ ಲಾಭ’ವನ್ನು ಗಳಿಸುವುದಕ್ಕೆ ಆಸ್ಪದ ನೀಡಿದ್ದಾರೆಂಬ ಆರೋಪಗಳ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಸಮಿತಿಯು ಸರ್ವೋಚ್ಚ ನ್ಯಾಯಾಲಯಕ್ಕೆ ಸೂಚನೆ ನೀಡಿದೆ.
ಸಮಿತಿಯ ಈ ವರದಿಯಿಂದಾಗಿ ಮತ್ತೆ ಮುಖ್ಯಮಂತ್ರಿ ಯಾಗಬೇಕೆಂಬ ಯಡಿಯೂರಪ್ಪನವರ ಪ್ರಯತ್ನಕ್ಕೆ ದೊಡ್ಡ ಹೊಡೆತ ಬಿದ್ದಂತಾಗಿದೆ. ಯಡಿಯೂರಪ್ಪನವರು ಅಧಿಕಾರಾವಧಿಯಲ್ಲಿ ಪ್ರವೀಣ್ ಚಂದ್ರ ಎಂಬವರಿಗೆ ಗಣಿಗುತ್ತಿಗೆ ನೀಡಿರುವುದಕ್ಕೂ, ಯಡಿಯೂರಪ್ಪರ ಕುಟುಂಬ ಸದಸ್ಯರು ಮಾಲಕರಾಗಿರುವ ಎರಡು ಸಂಸ್ಥೆಗಳಿಗೆ ಪ್ರವೀಣ್‌ಚಂದ್ರ ಅವರ ಗಣಿಗಾರಿಕಾ ಕಂಪೆನಿಯಿಂದ ಹಣ ಪಾವತಿ ಯಾಗಿರುವುದಕ್ಕೂ ಏನಾದರೂ ಸಂಬಂಧವಿದೆಯೇ ಎಂಬ ಬಗ್ಗೆಯೂ ತನಿಖೆಯಾಗಬೇಕೆಂದು ಪರಿಸರ ಸಮಿತಿಯು ಮುಖ್ಯ ನ್ಯಾಯಮೂರ್ತಿ ಎಸ್.ಎಚ್. ಕಪಾಡಿಯಾ ನೇತೃತ್ವದ ಸುಪ್ರೀಂಕೋರ್ಟ್‌ನ ಅರಣ್ಯ ಪೀಠಕ್ಕೆ ಮಾಡಿರುವ ಶಿಫಾರಸಿನಲ್ಲಿ ತಿಳಿಸಿದೆ. ಯಡಿಯೂರಪ್ಪ ಆಡಳಿತಾವಧಿಯಲ್ಲಿ ಕರ್ನಾಟಕದಲ್ಲಿ ಅಕ್ರಮ ಗಣಿಗಾರಿಕೆಯು ವ್ಯಾಪಕವಾಗಿ ನಡೆದಿದೆಯೆಂಬ ಆರೋಪಗಳ ಬಗ್ಗೆ ಸಿಬಿಐ ತನಿಖೆಗೆ ಕೇಂದ್ರೀಯ ಸಬಲೀಕರಣ ಸಮಿತಿ (ಸಿಇಸಿ) ಶಿಫಾರಸು ಮಾಡಿತ್ತು. ಜಿಂದಾಲ್ ಸಮೂಹಸಂಸ್ಥೆಗೆ ದೊಡ್ಡ ಪ್ರಮಾಣದಲ್ಲಿ ಅಕ್ರಮ ಅದಿರಿನ ಪೂರೈಕೆ ಹಾಗೂ ಎಂಎಂ ಲಿಮಿಟೆಡ್ ಸಂಸ್ಥೆಗೆ ಗಣಿಗಾರಿಕೆ ಗುತ್ತಿಗೆ ನೀಡಿಕೆ ಆರೋಪಗಳ ಬಗ್ಗೆಯೂ ಸಮಿತಿಯು ಪರಿಶೀಲನೆ ನಡೆಸಿದೆ.
ಜಿಂದಾಲ್ ಸಮೂಹದ ಗಣಿಗಾರಿಕೆ ಸಂಸ್ಥೆಯಾದ ಸೌತ್ ವೆಸ್ಟ್ ಮೈನಿಂಗ್ ಲಿಮಿಟೆಡ್ ಸಂಸ್ಥೆಯು ಯಡಿಯೂರಪ್ಪನವರ ಮಕ್ಕಳು ಸ್ಥಾಪಿಸಿರುವ ಪ್ರೇರಣಾ ಎಜ್ಯುಕೇಶನ್ ಸೊಸೈಟಿಗೆ ಮಾರ್ಚ್ 2010ರಂದು 10 ಕೋಟಿ ರೂ. ವೌಲ್ಯದ ಎರಡು ದೇಣಿಗೆಗಳನ್ನು ಪಾವತಿಸಿತ್ತು.
ಜಿಂದಾಲ್ ಉಕ್ಕು ಸಂಸ್ಥೆಯು ದೊಡ್ಡ ಪ್ರಮಾಣದಲ್ಲಿ ಅಕ್ರಮ ಅದಿರನ್ನು ಪಡೆದಿರುವುದಕ್ಕೆ ಪ್ರತಿಫಲವಾಗಿ ಅದು ಈ ದೇಣಿಗೆಗಳನ್ನು ಪಾವತಿಸಿರುವಂತೆ ಮೇಲ್ನೋಟಕ್ಕೆ ಕಂಡುಬರುತ್ತಿದೆಯೆಂದು ಆಯೋಗ ಶಂಕೆ ವ್ಯಕ್ತಪಡಿಸಿದೆ. ಯಡಿಯೂರಪ್ಪರಿಂದ ಗಣಿ ಗುತ್ತಿಗೆಯನ್ನು ಪಡೆದುದಕ್ಕೆ ಪ್ರತಿಫಲವಾಗಿ ಗಣಿಗಾರಿಕೆ ಕಂಪೆನಿಗಳು ಯಡಿಯೂರಪ್ಪರ ಮಕ್ಕಳು ನಡೆಸುತ್ತಿರುವ ಟ್ರಸ್ಟ್‌ಗೆ ಆರ್ಥಿಕವಾಗಿ ನೆರವಾಗಿವೆಯೆಂದು ಆರೋಪಿಸಿ ಸಮಾಜ ಪರಿವರ್ತನಾ ಸಮುದಾಯ ಎಂಬ ಎನ್‌ಜಿಓ ಸಂಸ್ಥೆಯು ಪರಿಸರ ಸಮಿತಿಗೆ ದಾಖಲೆ ಗಳನ್ನು ಸಲ್ಲಿಸಿತ್ತು.ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಜಮೀನಿನ ಡಿನೋಟಿಫಿಕೇಶನ್ ಪ್ರಕರಣದ ಬಗ್ಗೆಯೂ ಸಿಬಿಐ ತನಿಖೆ ಯಾಗಬೇಕೆಂದು ಪರಿಸರ ಸಮಿತಿಯು ಶಿಫಾರಸು ಮಾಡಿದೆ.ಈ ಬಹುಕೋಟಿ ಹಗರಣದ ಹಿಂದಿರುವ ಕೈಗಳನ್ನು ಬಯಲಿಗೆಳೆಯಲು ಸಿಬಿಐ ತನಿಖೆಗೆ ಆಜ್ಞಾಪಿಸುವಂತೆ ಸಮಿತಿಯು ಸರ್ವೋಚ್ಚ ನ್ಯಾಯಾಲಯವನ್ನು ಕೋರಿದೆ
Please follow and like us:
error