fbpx

ಪತ್ರಕರ್ತ ಎಂ.ಸಾಧಿಕ್ ಅಲಿಗೆ ಸನ್ಮಾನ

 ನಗರದ ಶ್ರೀ ರಾಘವೇಂದ್ರ ಸ್ವಾಮಿಗಳವರ ಮಠದ ಕಲ್ಯಾಣ ಮಂಟಪದಲ್ಲಿ ಶ್ರೀ ಶಾರದಾ ಸಂಗೀತ ಕಲಾ ಮತ್ತು ಶಿಕ್ಷಣ ಸಂಸ್ಥೆಯ ೭ನೇ ವರ್ಷದ ಸಂಗೀತ ಮಹೋತ್ಸವ ಕಾರ್ಯಕ್ರಮ ಹಾಗೂ ಅಹೋ ರಾತ್ರಿ ಶಾಸ್ತ್ರಿಯ ಸಂಗೀತ ಮತ್ತು ಸುಗಮ ಸಂಗೀತ ಕಾರ್ಯಕ್ರಮದಲ್ಲಿ ಹಿರಿಯ ಪತ್ರಕರ್ತ ಎಂ.ಸಾಧಿಕ್ ಅಲಿ ಯವರಿಗೆ ಸನ್ಮಾನಿಸಲಾಯಿತು. 
ಈ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ಬಬಲಾದಿ, ಶ್ರೀ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷ ಶ್ರೀ ಚೈತನ್ಯಾನಂದ ಸ್ವಾಮಿಜಿ, ಹಿರಿಯ ನ್ಯಾಯವಾದಿಗಳಾದ ಆರ್.ಬಿ.ಪಾನಗಂಟಿ, ವಿ.ಎಂ.ಭೂಸನೂರಮಠ, ಎ.ವಿ.ಕಣವಿ, ಸಾಹಿತಿಗಳಾದ ಡಾ|| ವಿ.ಬಿ.ರಡ್ಡೇರ್, ಅಲ್ಲಮಪ್ರಭು ಬೆಟ್ಟದೂರು, ಗಂಗಾಧರ ಅರಳಿಕಟ್ಟಿ, ಭರಮಪ್ಪ ಜುಟ್ಲದ್, ಹಿರಿಯ ಪತ್ರಕರ್ತ ಪರಮಾನಂದ ಯಾಳಗಿ ಸೇರಿದಂತೆ ಕಾರ್ಯಕ್ರಮ ಸಂಘಟಕ ಲಚ್ಚಣ್ಣ ಹಳೇಪೆಟೆ ಮತ್ತಿತರರು ಪಾಲ್ಗೊಂಡಿದ್ದರು.
Please follow and like us:
error

Leave a Reply

error: Content is protected !!