ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣ ಅಳವಡಿಕೆ ಅವಧಿ ವಿಸ್ತರಣೆ.

ಕೊಪ್ಪಳ, ಜ.೨೯ (ಕ ವಾ) ಕೊಪ್ಪಳ ಜಿಲ್ಲೆಯ ಮರಳು ಸಾಗಾಣಿಕೆ ವಾಹನಗಳಿಗೆ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳಲು ನೀಡಲಾಗಿದ್ದ ಕಾವಕಾಶವನ್ನು ಫೆ.೧೫ ರವರೆಗೆ ವಿಸ್ತರಿಸಲಾಗಿದೆ.
     ಜಿಲ್ಲೆಯ ಎಲ್ಲ ಮರಳು ಸಾಕಾಣಿಕೆದಾರರು ತಮ್ಮ ಮರಳು ಸಾಗಾಣಿಕೆ ವಾಹನಗಳಿಗೆ ಕಡ್ಡಾಯವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳಲು ಈ ಹಿಂದೆ ಜ.೩೧ ರವರೆಗೆ ನೀಡಲಾಗಿದ್ದ ಗಡುವನ್ನು ಫೆ.೧೫ ರವರೆಗೆ ವಿಸ್ತರಿಸಲಾಗಿದೆ. ಮರಳು ಸಾಗಾಣಿಕೆದಾರರು  ಒಂದು ವೇಳೆ ನಿಗದಿಪಡಿಸಿದ ಅವಧಿಯೊಳಗಾಗಿ ತಮ್ಮ ವಾಹನಗಳಿಗೆ ಜಿ.ಪಿ.ಎಸ್ ಉಪಕರಣವನ್ನು ಅಳವಡಿಸಿಕೊಳ್ಳದೇ ಇದ್ದಲ್ಲಿ, ಅಂತಹ ವಾಹನಗಳಿಗೆ ಮರಳು ಸಾಗಾಣಿಕೆಯ ಪರ್ಮಿಟ್ ನೀಡಲಾಗುವುದಿಲ್ಲ ಎಂದು ಲೋಕೋಪಯೋಗಿ, ಬಂದರು ಮತ್ತು ಒಳನಾಡು, ಜಲಸಾರಿಗೆ ವಿಭಾಗ, ಕೊಪ್ಪಳದ ಕಾರ್ಯನಿರ್ವಾಹಕ ಇಂಜಿನೀಯರು ತಿಳಿಸಿದ್ದಾರೆ.

Please follow and like us:
error