ಲಾಠಿ ಚಾರ್ಜ್ ಸಿಪಿಐ(ಎಂಎಲ್) ಜಿಲ್ಲಾ ಸಮಿತಿ ತೀವ್ರ ಖಂಡನ

    ಮೊನ್ನೆ ದಿನಾಂಕ:೧೧-೧೨-೨೦೧೨ ರಂದು ನಡೆದ ಬೆಳಗಾವಿಯ ಸುವರ್ಣ ವಿಧಾನಸೌಧದ ಎದುರು ಕಲಾಪಗಳು ನಡೆಯುತ್ತಿದ್ದ ಸಂದರ್ಭದಲ್ಲಿ ಮೀಸಲಾತಿ ವರ್ಗೀಕರಣಕ್ಕಾಗಿ ಕೆಲವು ದಲಿತ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ನ್ಯಾಯಮೂರ್ತಿ ಎ.ಜೆ.ಸದಾಶಿವ ಆಯೋಗದ ವರದಿ ಅಂಗೀಕರಿಸಲು ಒತ್ತಾಯಿಸುತ್ತಿದ್ದಾಗ, ಕಲಾಪದಲ್ಲಿ ಈ ಕುರಿತು ಯಾವುದೇ ಪ್ರಸ್ತಾವನೆಗಳನ್ನು ಸ್ವೀಕರಿಸದೇ ಸರ್ಕಾರ ಅಸಡ್ಡೆ ತೋರಿತು. ಜವಾಬ್ದಾರಿಯಿಂದ ಹಿಂದೆ ಸರಿದ ಸರ್ಕಾರದ ಕ್ರಮವನ್ನು ಖಂಡಿಸಿ ಹೋರಾಟಗಾರರು ಪ್ರತಿಭಟನೆಯನ್ನು ತೀವ್ರಗೊಳಿಸಿದಾಗ ಅಲ್ಲಿನ ಸರ್ಕಾರ ಪ್ರಚೋದಿತ ಪೋಲಿಸರು ಪ್ರತಿಭಟನಾಕಾರರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್ ನಡೆಸಿ, ಅಶ್ರುವಾಯು ಸಿಡಿಸಿದ್ದಲ್ಲದೇ ೩೦ ಜನ ಪ್ರಮುಖರನ್ನು ಬಂಧಿಸಿದ್ದನ್ನು ಸಿಪಿಐ(ಎಂಎಲ್) ಜಿಲ್ಲಾ ಸಮಿತಿ ತೀವ್ರವಾಗಿ ಖಂಡಿಸುತ್ತದೆ.
            ಬಿಜೆಪಿ ಸರ್ಕಾರ ಆರಂಭದಿಂದಲೇ ಹಾವೇರಿಯಲ್ಲಿ ರೈತರ ಮೇಲೆ ಗೋಲಿಬಾರ್ ನಡೆಸಿ ತನ್ನ ಕರಾಳ ಅಧ್ಯಾವನ್ನು ಆರಂಭಿಸಿತು. ಅಲ್ಲದೇ ದಾವಣಗೆರೆ, ಚಾಮರಾಜನಗರ ಹಾಗೂ ಮಾರ್ಚ್ ೨೫, ೨೦೧೧ ರಂದು ಕೊಪ್ಪಳದಲ್ಲಿ ಖಾತ್ರಿ ಕೂಲಿ ಕೇಳಿದವರ ಮೇಲೆ ಅಮಾನುಷವಾಗಿ ಲಾಠಿ ಚಾರ್ಜ್ ಮಾಡಿ ಹೋರಾಡುವವರನ್ನು ಜೈಲಿಗೆ ತಳ್ಳಿ ಕ್ರಿಮಿನಲ್ ಪ್ರಕರಣ ದಾಖಲಿಸಿ ಕೋರ್ಟ್‌ಗೆ ಅಲೆಯುವಂತೆ ಮಾಡಿದೆ. ಇದರ ಭಾಗವಾಗಿ ಕೊಪ್ಪಳದಲ್ಲಿ ೬೮ ಜನರು ಸುಮಾರು ೧೦ ವರ್ಷ ಶಿಕ್ಷೆ ವಿಧಿಸಬಹುದಾದ ಆರೋಪದಡಿ ನ್ಯಾಯಾಲಯಕ್ಕೆ ಅಲೆಯುತ್ತಿದ್ದಾರೆ. ಅಲ್ಲದೇ ಗಂಗಾವತಿಯ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕನ್ನಡ ಶಾಲೆಗಳಿಗಾಗಿ ಹೋರಾಡಿದ ವಿಧ್ಯಾರ್ಥಿಗಳ ಮೇಲೆ ಲಾಠಿ ಚಾರ್ಜ್ ನಡೆಸಿ ಜೈಲಿಗೆ ತಳ್ಳಲಾಯಿತು. ಇಷ್ಟೇ ಅಲ್ಲದೇ ಭೂಮಿಗಾಗಿ, ಭೂಸ್ವಾಧೀನ ವಿರೋಧಿಯಾಗಿ, ಗಣಿ ಅಕ್ರಮ ತನಿಖೆ-ನೈಸರ್ಗಿಕ ಸಂಪತ್ತಿನ ರಕ್ಷಣೆಗಾಗಿ ಹಾಗೂ ರಿಯಲ್‌ಎಸ್ಟೇಟ್ ವಿರುದ್ಧ ಹೋರಾಡಿದರನ್ನು ಬಂಧಿಸಲಾಗಿದೆ. ಅಥವಾ ಅಂಥವರ ಕೊಲೆಯಾಗುವುದು ಸಾಮಾನ್ಯವಾಗುತ್ತಿದೆ.
                    ಇಂತಹ ಕಾರ್ಪೋರೇಟ್ ಕಂಪನಿ ಮತ್ತು ವಿದೇಶಿ ಬಂಡವಾಳಿಗರ ಏಜೆಂಟ್ ಸರ್ಕಾರ ದೇಶಿಯ ಹೋರಾಟಗಳನ್ನು ಹತ್ತಿಕ್ಕುತ್ತಾ ಗೋಲಿಬಾರ್, ಲಾಠಿಚಾರ್ಜ್, ಅಶ್ರುವಾಯು ಸಿಡಿಸುವುದು ಹಾಗೂ ಬಂಧಿಸಿ ಜೈಲಿಗೆ ತಳ್ಳುವ ಮೂಲಕ ತನ್ನ ಪ್ಯಾಸಿಸ್ಟ್ ನೀತಿಯನ್ನು ಹೊರ ಹಾಕಿದೆ. ಕೂಡಲೇ ಮಾನ್ಯ ರಾಜ್ಯಪಾಲರು ಮಾನ್ಯ ಜಗದೀಶ್ ಶೆಟ್ಟರ್ ನೇತೃತ್ವದ ಸರ್ಕಾರವನ್ನು ವಿಸರ್ಜಿಸಬೇಕೆಂದು ಒತ್ತಾಯಿಸಲಾಗಿದೆ.

(ಕೆ.ಬಿ.ಗೋನಾಳ)        (ಹನುಮೇಶ ಪೂಜಾರ್)   (ಬಸವರಾಜ್ ನರೇಗಲ್)     (ಹನುಮೇಶ ಕವಿತಾಳ)
 ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ,   ಎಐಆರ್‌ಎಸ್‌ಓ ಜಿಲ್ಲಾಧ್ಯಕ್ಷ,       ಟಿಯುಸಿಐ ಜಿಲ್ಲಾಧ್ಯಕ್ಷ,     ಎಐಆರ್‌ಎಸ್‌ಓ ಜಿಲ್ಲಾ ಕಾರ್ಯದರ್ಶಿ

    (ವಿದ್ಯಾ ನಾಲ್ವಾಡ)               (ಮಲ್ಲಿಕಾ ಪೂಜಾರ್)          (ಷಮ್‌ಷಾದ್‌ಬೇಗಂ ಕಲೆಗಾರ್)       (ಬಸವರಾಜ.ಕೆ. ಬಹದ್ದೂರಬಂಡಿ) 
ಎಐಆರ್‌ಡಬ್ಲ್ಯೂಓ ಜಿಲ್ಲಾಧ್ಯಕ್ಷರು,  ಎಐಆರ್‌ಡಬ್ಲ್ಯೂಓ ರಾಜ್ಯ ಉಪಾಧ್ಯಕ್ಷರು,  ಎಐಆರ್‌ಡಬ್ಲ್ಯೂಓ ಜಿಲ್ಲಾ ಕಾರ್ಯದರ್ಶಿ,  ಉ.ಖಾ.ಹೋ. ಸಮಿತಿ ಸಂಚಾಲಕರು  

ಧರಣಿ ಹೋರಾಟದಲ್ಲಿ ಶಿವಲೀಲಾ ಹಿರೇಮಠ, ಜಾಫರ್‌ಸಾಬ ಗೊಂಡಬಾಳ, ಶಾಕೀರ್, ಖಾಜಾ ಹುಸೇನ್ ರೇವಡಿ, ಈಶಪ್ಪ ಹೂಗಾರ್, ನಾಗಮ್ಮ, ಮರ್ದಾನ್‌ಬೀ, ಗಂಗಮ್ಮ ಸೇರಿದಂತೆ ಹಲವರು ಭಾಗವಹಿಸಿದ್ದರು.   

Leave a Reply