ಸೌಹಾರ್ಧತೆ, ಸಹಬಾಳ್ವೆಗೆ ಸೂಫಿ ಸಂತರ ಕೊಡುಗೆ ಅಪಾರ-ಜಿ.ಪಂ. ಸದಸ್ಯ ಕೆ.ರಾಜಶೇಖರ ಹಿಟ್ನಾಳ.

ಕೊಪ್ಪಳ- ೦೫, ನಗರದ ಹಜರತ್ ಮರ್ದಾನಗೈಬ್ ದರ್ಗಾದ ಉರುಸ್ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ನೂತನ ಜಿ.ಪಂ.ಸದಸ್ಯ ಕೆ.ರಾಜಶೇಖರ ಹಿಟ್ನಾಳರವರು ಸಮಾಜದ ಎಲ್ಲಾ ವರ್ಗದ ಜನರನ್ನು ಸನ್ಮಾರ್ಗದಲ್ಲಿ ನಡೆಯುವಂತೆ ಬೋದಿಸಿ ಮನುಕುಲದ ಎಳ್ಗೆಗಾಗಿ ಶ್ರಮಿಸಿದ್ದು, ನಮ್ಮ ನಾಡಿನ ಸೂಫಿ ಸಂತರು ಹಾಗೂ ಶರಣರ ಕೊಡುಗೆ ಅಪಾರವಾಗಿದೆ. ಭಾರತ ದೇಶದ ಅಷ್ಟದಿಕ್ಕುಗಳಲ್ಲಿ ನೆಲೆಸಿರುವ ಸೂಫಿ ಸಂತರು ಭಾರತದ ಜನತೆ ಶಾಂತಿ, ಸೌಹಾರ್ಧತೆ, ಸಹಬಾಳ್ವೆಯಿಂದ ಸಮಾಜದಲ್ಲಿ ಬಾಳಲು ಇವರ ತತ್ವಾದರ್ಶಗಳನ್ನು ಪ್ರತಿಯೊಬ್ಬರು ಪಾಲಿಸಬೇಕು. ಕೊಪ್ಪಳದ ೭೦೦ ವರ್ಷಗಳ ಇತಿಹಾಸವನ್ನು ಹೊಂದಿರುವ ಮರ್ದಾನಗೈಬ್ ದರ್ಗಾವು ಸಾಮರಸ್ಯ
ಹಾಗೂ ಭಾವೈಕ್ಯತೆಯ ಪೂಜ್ಯಸ್ಥಳವಾಗಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಹುಟ್ಟಿರುವದೇ
ನಮ್ಮ ಸುದೈವ ಎಂದು ಹೇಳಿದರು.

Please follow and like us:
error