ಕೊಪ್ಪಳ, ೧೦ -ನಗರದ ಲಯನ್ಸ್ ಕ್ಲಬ್ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯ ಎ. ಧನಂಜಯನ್ ಮತ್ತು ಶಿಕ್ಷಕ ಸಿಬ್ಬಂದಿ ವರ್ಗದವರು ಯು.ಪಿ.ಎಸ್.ಸಿ. (ಐ.ಎ.ಎಸ್.) ಪರೀಕ್ಷೆಯಲ್ಲಿ ೮೨ ನೇ ರ್ಯಾಂಕ್ ಪಡೆದು ಸಾಧನೆ ಮಾಡಿದ ಕೊಪ್ಪಳ ಜಿಲ್ಲಾ ಪೋಲೀಸ್ ವರಿಷ್ಠಾಧಿಕಾರಿ ಪಿ. ರಾಜಾ ಇವರನ್ನು ಅವರ ಕಛೇರಿಯಲ್ಲಿ ಭೇಟಿ ಮಾಡಿ, ಅಭಿನಂಧನೆ ಸಲ್ಲಿಸಿ, ಶಾಲೆಯ ವತಿಯಿಂದ ಸನ್ಮಾನಿಸಲಾಯಿತು.ನಂತರ ಅರ್ಧ ಗಂಟೆಗೂ ಹೆಚ್ಚಿನ ಸಮಯ ಅವರೊಂದಿಗೆ ವಿಚಾರ ವಿನಿಮಯ ಮಾಡಲಾಯಿತು. ಸಾಧಿಸುವ ಹಂಬಲ, ಛಲ ಮತ್ತು ನಿರಂತರ ಪರಿಶ್ರಮ ಇದ್ದಾಗ ಎಲ್ಲಾ ಶಕ್ತಿಗಳು ನಮ್ಮ ಸಾಧನೆಗೆ ಪೂರಕವಾಗಿ ಸಹಕರಿಸುತ್ತವೆ. ಕರ್ನಾಟಕದಲ್ಲಿ ಸೇವೆ ಸಲ್ಲಿಸುವ ಹಂಬಲ ಹೊಂದಿದ್ದೇನೆ ಎಂದು ಎಸ್.ಪಿ.ಯವರು ತಮ್ಮ ಮನದಾಳದ ಇಂಗಿತ ವ್ಯಕ್ತಪಡಿಸಿದರು.ಮಕ್ಕಳ ಭವಿಷ್ಯ ರೂಪಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದಾಗಿದ್ದು, ತಾವು ಸಹ ಶಿಕ್ಷಕರಾಗಬೇಕೆಂಬ ಕನಸನ್ನು ಹೊಂದಿದ್ದರೆಂಬುದನ್ನು ಹೇಳಿದರು. ಶಿಕ್ಷಕರ ಪಾತ್ರ ದೇಶದ ಅಭಿವೃದ್ಧಿಯಲ್ಲಿ ಬಹಳ ಮುಖ್ಯ ಎಂದು ಅಭಿಪ್ರಾಯಪಟ್ಟರು.
ವಿವೇಕಾನಂದ ಶಾಲೆಯ ವತಿಯಿಂದ ಕೊಪ್ಪಳ ಎಸ್.ಪಿ. ಪಿ.ರಾಜಾರಿಗೆ ಅಭಿನಂದನೆ.
Leave a Reply
You must be logged in to post a comment.