ಬೆಣಕಲ್‌ನಲ್ಲಿ ಉದ್ಯೋಗಖಾತ್ರಿಯಡಿ ಅರಣ್ಯೀಕರಣ ಕಾಮಗಾರಿಗೆ ಚಾಲನೆ.

ಕೊಪ್ಪಳ ಸೆ.೦೫ (ಕ ವಾ) ಜಿಲ್ಲೆಯಲ್ಲಿ ಬರ ಪರಿಸ್ಥಿತಿ ನಿರ್ವಹಣೆಗೆ ಕೂಲಿಕಾರರಿಗೆ ಉದ್ಯೋಗ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗಖಾತ್ರಿ ಯೋಜನೆಯಡಿ ಗಂಗಾವತಿ ತಾಲೂಕಿನ ಚಿಕ್ಕಬೆಣಕಲ್ ಮತ್ತು ಹಿರೇಬೆಣಕಲ್ ಗ್ರಾಮದಲ್ಲಿ ಕೆರೆ ಅಭಿವೃದ್ಧಿ ಮತ್ತು ಅರಣ್ಯೀಕರಣ ಕಾಮಗಾರಿಯನ್ನು ಪ್ರಾರಂಭಿಸಿ ನೂರಾರು ಕೂಲಿಕಾರರಿಗೆ ಉದ್ಯೋಗ ಒದಗಿಸಲಾಗುತ್ತಿದೆ.
       ಚಿಕ್ಕಬೆಣಕಲ್ ಗ್ರಾಮದಲ್ಲಿ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಡಬಾಸ ಬಂಡಿ ಕೆರೆ ಅಭಿವೃದ್ಧಿಪಡಿಸುವುದು ಮತ್ತು ಅರಣ್ಯೀಕರಣ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ನೀಡಲಾಯಿತು. ಸುಮಾರು ೩೫೦ ಕೂಲಿಕಾರರು ಕಾಮಗಾರಿಯಲ್ಲಿ ತೊಡಗಿಕೊಂಡಿದ್ದಾರೆ.  ಹಿರೇಬೆಣಕಲ್ ಗ್ರಾಮದಲ್ಲಿ ಅರಣ್ಯೀಕರಣ ಕಾಮಗಾರಿ ಪ್ರಾರಂಭಿಸಿ ಕೂಲಿಕಾರರಿಗೆ ಕೆಲಸ ನೀಡಲಾಗಿದ್ದು ೧೫೦ ಕೂಲಿಗಾರರು ಪಾಲ್ಗೊಂಡಿದ್ದಾರೆ.
      ಕಾಮಗಾರಿ ಸ್ಥಳಗಳಿಗೆ ತಾಲೂಕಾ ಪಂಚಾಯತಿಯ ಸಹಾಯಕ ನಿರ್ದೇಶಕ ತಿಮ್ಮಣ್ಣ ಹಾಗೂ ಐ.ಇ.ಸಿ ಸಂಯೋಜಕ ಕೃಷ್ಣನಾಯಕ ಹಾಗೂ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಮಹೇಶ ಅವರು ಬೇಟಿ ನೀಡಿ ಕಾಮಗಾರಿ ಪರಿಶೀಲಿಸಿ, ಕೂಲಿಕಾರರಿಗೆ ಯೋಜನೆ ಬಗ್ಗೆ ಸಲಹೆ ಸೂಚನೆಗಳನ್ನು ನೀಡಿದರು. ಗ್ರಾಮ ಪಂಚಾಯತ ಸಿಬ್ಬಂದಿಗಳು, ಹಾಗೂ ಕಾಯಕಬಂದುಗಳು ಉಪಸ್ಥಿತರಿದ್ದರು.

Related posts

Leave a Comment