ಕೊಪ್ಪಳ ಜ. ೦೭ (ಕ.ವಾ) ಸರ್ಕಾರದ ಕೆಲಸದಲ್ಲಿ ವಿನೂತನ ಪದ್ದತಿ, ನಾಗರಿಕ ಸ್ನೇಹಿ, ಗುಣಾತ್ಮಕ, ಭ್ರಷ್ಟಾಚಾರರಹಿತ ಹಾಗೂ ಚಲನಶೀಲ ಆಡಳಿತ ನೀಡಿದ ರಾಜ್ಯ ಸರ್ಕಾರಿ ನೌಕರರಿಗೆ ಸರ್ವೋತ್ತಮ ಸೇವಾ ಪ್ರಶಸ್ತಿಯನ್ನು ನೀಡಲಾಗುತ್ತಿದ್ದು, ಪ್ರಸ್ತಾವನೆಗಳನ್ನು ಆಹ್ವಾನಿಸಲಾಗಿದೆ.
ಸರ್ಕಾರಿ ಕರ್ತವ್ಯದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ಗ್ರೂಪ್-‘ಸಿ’ ಹಾಗೂ ಪತ್ರಾಂಕಿತ ವೃಂದದ ನೌಕರರಿಗೆ ಪ್ರತಿ ವರ್ಗದಲ್ಲಿ ತಲಾ ಇಬ್ಬರಿಗೆ ಗಣರಾಜ್ಯೋತ್ಸವ ದಿನಾಚರಣೆ ಸಂದರ್ಭದಲ್ಲಿ ಸರ್ವೋತ್ತಮ ಸೇವಾ ಪ್ರಶಸ್ತಿ ನೀಡಲು ಸರ್ಕಾರ ಯೋಜನೆ ರೂಪಿಸಿದೆ. ಅಧಿಕಾರಿ, ಸಿಬ್ಬಂದಿಗಳು ನಿಗದಿತ ನಮೂನೆಯಲ್ಲಿ ಪ್ರಸ್ತಾವನೆಯನ್ನು ಕಚೇರಿ ಮುಖ್ಯಸ್ಥರ ಮೂಲಕ ವಿಶಿಷ್ಟ ಸೇವಾ ವಿವರಗಳನ್ನು ನಮೂದಿಸಿ, ಅಗತ್ಯ ದಾಖಲಾತಿಗಳ ಸಹಿತ ಜ. ೧೪ ರೊಳಗೆ ಸಲ್ಲಿಸುವಂತೆ ಅಪರ ಜಿಲ್ಲಾಧಿಕಾರಿ ಡಾ. ಪ್ರವೀಣಕುಮಾರ್ ಜಿ.ಎಲ್. ಅವರು ತಿಳಿಸಿದ್ದಾರೆ.

Please follow and like us: