ಕೋಳೂರ ಕ್ಲಷ್ಟರ ಮಟ್ಟದ ಪ್ರತಿಭಾ ಕಾರಂಜಿ

 ತಾಲೂಕಿನ ಕೋಳೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಷ್ಟರಮಟ್ಟದ ಪ್ರತಿಭಾ ಕಾರಂಜಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಊದ್ಘಾಟಕರಾಗಿ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ ಪೂಜಾರ ಆಗಮಿಸಿದ್ದರು. ಮುಖ್ಯ ಅತಿಥಿಗಳಾಗಿ ಶಿಕ್ಷಣ ಸಂಯೋಜಕರಾದ ಎಸ್. ಬಿ. ಕುರಿ, ಮತ್ತು ಹನಮಂತಪ್ಪ ನಾಯಕ, ಸಿ.ಆರ್.ಪಿ. ವೆಂಕಟೇಶ ದೇಶಪಾಂಡೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಎಮ್.ಸಿ ಅಧ್ಯಕ್ಷ ಪರುಶುರಾಮ್ ಬಿಸರಳ್ಳಿ ವಹಿಸಿದ್ದರು. ಪ್ರೌಢಶಾಲಾ ಎಸ್.ಡಿ.ಎಮ್.ಸಿ ಅಧ್ಯಕ್ಷ ಹನಮಂತಪ್ಪ ಈಳಗೇ, ಮತ್ತು ಸರ್ವ ಸದಸ್ಯರು, ಗ್ರಾಮದ ಮುಖ್ಯಸ್ಥರು, ಚುನಾಯಿತ ಪ್ರತಿನಿಧಿಗಳು ಉಪಸ್ಥಿತರಿದ್ದರು. 
ಗುರಪ್ಪ ಗಿಡ್ಡಪ್ಪಗೌಡ ಸ್ವಾಗತಿಸಿದರು. ಪ್ರಸ್ತಾವಿಕವಾಗಿ ಸಿ.ಆರ್.ಪಿ ಹನಮಂತಪ್ಪ ಕೊಡ್ಲಿ ಮಾತನಾಡಿದರು. ಮಲ್ಲಯ್ಯ ನಿರೂಪಸಿದರು. ಶಾಲೆಯ ಮುಖ್ಯೋಪಾದ್ಯಾಯರಾದ ನಾಗಪ್ಪ ಕಲ್ಲಣ್ಣವರ ವಂದಿಸಿದರು.
ಕ್ಲಷ್ಟರ ವ್ಯಾಪ್ತಿಯ ಎಲ್ಲಾಶಾಲೆಯ ಮಕ್ಕಳು ಭಾಗವಹಿಸಿ ತಮ್ಮ ಪ್ರತಿಭೆಗಳನ್ನು ಅನಾವರಣ ಗೊಳಿಸಿದರು.  

Leave a Reply