ಕಮ್ಯುನಿಸ್ಟ್ ಪಕ್ಷಗಳು ಮತ್ತು ಅಫ್ ನಂತಹ ” ಅರಾಜಕತವಾದಿ ” ಪಕ್ಷಗಳು ಪರ್ಯಾಯ ಸ್ಥಾನತುಂಬಬೇಕು

ಕೇಜ್ರಿವಾಲರ ಪ್ರಕಾರ ದೆಹಲಿಯಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಸೋಲಲು ಕಾರಣ ಅಹಂಕಾರ. ಇದು ಅವರ ವಿಶ್ಲೇಷಣೆ. ಕಳೆದಬಾರಿ ಆಫ್ ಪಕ್ಷಕ್ಕೆ ಈ ಎರಡೂ ಪಕ್ಷಗಳು ಸೇರಿ ಮಾಡಿದ ಬಂಡವಾಳಶಾಹಿಗಳ ಪರವಾದ ಕುತಂತ್ರವನ್ನು  ದೆಹಲಿ ಜನತೆ ಮರೆತಿಲ್ಲ. ಕೋಮುವಾದ ಜಾಗತೀಕರಣದ ಪರವಾಗಿರುವ ಇವುಗಳ ಬಣ್ಣ ಬಯಲಾಗುತ್ತಲಿದೆ. ಜನತೆಯ ಮೂಲಭೂತ ಸಮಸ್ಯೆಗಳನ್ನು ಅಂದರೆ ನೀರು ವಿದ್ಯುಚ್ಛಕ್ತಿ ಗಳನ್ನು  ಅಗ್ಗಗೊಳಿಸುವ ಕನಸು ಬಹಳ ಆಕರ್ಷಕ. ಜನತೆ ನೋಡುವುದು ನಿತ್ಯ ಸಮಸ್ಯೆಗಳ ಪರಿಹಾರಕ್ಕೆ.  ೫೬ ಇಂಚುಗಳಷ್ಟು ಎದೆಗಾರಿಕೆಯನ್ನಲ್ಲ. ಹಿಂದು ಕೋಮುವಾದಿಗಳ ಅಟ್ಟ ಹಾಸ ದ ಬಗೆಗೆ  ಪ್ರತಿಕ್ರಿಯೆ ನೀಡದ ಈ ಧರ್ಮನಿರಪೇಕ್ಷ ದೇಶದ ಪ್ರದಾನ ಮಂತ್ರಿ ಕೇಜ್ರೀವಾಲರನ್ನು ಅರಾಜಕತಾವಾದಿ ಎಂದು ಹರಿದು ಅವರು ಮಾವೋವಾದಿಗಳನ್ನು ಸೇರಿಕೊಳ್ಳಲು ಕರೆನೀಡಿದ್ದರು. 
ನಿಜ,  ಅನೇಕ ಸೈದ್ಧಾಂತಿಕ ಪ್ರಶ್ನೆಯಲ್ಲಿ ಅವರು ಅರಾಜಕತವಾದಿಯೇ. ಬಿಜೆಪಿ ಮತ್ತು ಕಾಂಗ್ರೆಸ್ ನಂತಹ ಬಂಡವಾಳಶಾಹಿ ಪಕ್ಷಗಳ ವಿರುದ್ಧದ ಹೋರಾಟದಲ್ಲಿ ಇತಿಹಾಸದುದ್ದಕ್ಕೂ ಅರಾಜಕತಾವಾದಿಗಳು ಕಿಡಿಗಳಾಗಿದ್ದಾರೆ. ಆಫ್ ಪಕ್ಷಕ್ಕೆ ಎಡ ಪಕ್ಷಗಳು ನೀಡಿದ ಬೆಂಬಲ ವಿವೇಚನಾಪೂರ್ಣವಾಧ್ದು. ಈಶಾನ್ಯ ಭಾರತದ ಜನತೆಯನ್ನು ವಲಸೆಗಾರರು ಎಂತ ಬಿಜೆಪಿ ಹಿಂದು ಅತಿಪ್ರೇಮಿ ಮನಸ್ಥಿತಿಯನ್ನು ಪ್ರಕಟಿಸಿದ ಮೇಲೆ ಅದರ ಅಪಜಯ ನಿರೀಕ್ಷಿತವಾಯಿತು. ಇಂದು ಕಾಂಗ್ರೆಸ್ ಐತಿಹಾಸಿಕವಾಗಿ ಅಪ್ರಸ್ತುತವಾಗುತ್ತಿದ್ದು , ದೇಶದಲ್ಲೆಲ್ಲಾ ಜನತೆಯ ಆಶೋತ್ತರವನ್ನು ಪ್ರತಿನಿಧಿಸುವ ಮೂರನೆಯ ಶಕ್ತಿ ಅನಿವಾರ್ಯವಾಗುತ್ತಿದೆ. ಕೋಮುವಾದಿ ಹಿಂದುತ್ವಕ್ಕೆ  ಮತ್ತು ಕಾಂಗ್ರೆಸ್ ಗೆ ಪರ್ಯಾಯವಾಗಿ ಕಮ್ಯುನಿಸ್ಟ್ ಪಕ್ಷಗಳು ಮತ್ತು ಅಫ್ ನಂತಹ ” ಅರಾಜಕತವಾದಿ ” ಪಕ್ಷಗಳು ಈ ಸ್ಥಾನವನ್ನು ತುಂಬಬೇಕು. ಇದು ಕಾಲದ ಕರೆ.
ಡಾ. ವಿ.ಲಕ್ಷ್ಮೀ ನಾರಾಯಣ. #೫೫೯೮. ೫ನೆಯ ಕ್ರಾಸ್. ವಿಜಯನಗರ ಎರಡನೆಯ ಹಂತ.  ಮೈಸೂರು.
Please follow and like us:
error