ನೂತನ ಪ್ರಾಚಾರ್ಯರಾಗಿ ಎಂ.ಎಸ್ ದಾದ್ಮಿ

ಕೊಪ್ಪಳ: ನಗರದ ಶ್ರೀಗವಿಸಿದ್ಧೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಇಂದು ನೂತನ ಪ್ರಾಚಾರ್ಯರಾಗಿ  ರಸಾಯನ ಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಎಂ.ಎಸ್ ದಾದ್ಮಿ ಅಧಿಕಾರ ಸ್ವೀಕರಿಸಿದರು. ಮಹಾವಿದ್ಯಾಲಯಲ್ಲಿಂದು ಜರುಗಿದ ಎಸ್.ಎಲ್ ಮಾಲಿಪಾಟೀಲ , ಎಂ.ಎಸ್ ಬಾಚಲಾಪುರ ಹಾಗೂ ಬೆರಳಚ್ಚುಗಾರ ಹನುಮನಗೌಡ ಇವರಿಗೆ ವೃತ್ತಿಯಿಂದ ಬೀಳ್ಕೊಡುವ ಸರಳ ಸಮಾರಂಭದಲ್ಲಿ  ಈ ಅಧಿಕೃತ ಘೋಷಣೆ ಹೊರ ಹೊಮ್ಮಿತು.  ನಂತರ ಮಾತನಾಡಿದ ನೂತನ ಪ್ರಾಚಾರ್ಯ  ಪೂಜ್ಯ ಶ್ರೀಗವಿಸಿದ್ಧೇಶ್ವರ ಸ್ವಾಮಿಗಳು ಈ ಭಾಗವನ್ನು ಶೈಕ್ಷಣಿಕ ಮಾದರಿ ಕೇಂದ್ರವನ್ನಾಗಿಸುವ ಸಂಕಲ್ಪ ತೊಟ್ಟಿದ್ದಾರೆ. ಅವರ ಕನಸನ್ನು ನನಸಾಗಿಸುವ ದಿಸೆಯಲ್ಲಿ ನಾವೆಲ್ಲ ಪ್ರಯತ್ನಿಸೋಣ ತಮ್ಮೆಲ್ಲರ ಸಹಕಾರ ಅಗತ್ಯವಿದೆ ಎಂದರು. ಈ ಸಂದಭದಲ್ಲಿ ಹಿಂದಿನ ಪ್ರಾಚಾರ್ಯ ಎಸ್.ಎಲ್. ಮಾಲಿ ಪಾಟೀಲ ಶುಭ ಕೋರಿದರು. 
Please follow and like us:
error