ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ಅಮರೇಶ ಕೂಳಗಿ,ನವೀನಕುಮಾರ ಮೂಲಿಮನಿ ಅಭಿನಂದನೆ

ದಿನಾಂಕ: ೦೬.೦೬.೨೦೧೪ ರಂದು ಸರ್.ಎಂ. ವಿಶ್ವೇಶ್ವರಯ್ಯ ಜಿಲ್ಲಾ ಸಿವಿಲ್ ಗುತ್ತಿಗೆದಾರರ ಸಂಘದ ವತಿಯಿಂದ ನೂತನವಾಗಿ ಆಯ್ಕೆಯಾದ ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ಅಮರೇಶ ಕೂಳಗಿ ಹಾಗೂ ಉಪಾಧ್ಯಕ್ಷರಾದ ನವೀನಕುಮಾರ ಮೂಲಿಮನಿ ರವರಿಗೆ ಅಬಿನಂದಿಸಿ ಸನ್ಮಾನ ಮಾಡಲಾಯಿತು. ಈ
        ಸಂದರ್ಭದಲ್ಲಿ ಗುತ್ತಿಗೆದಾರರ ಬೇಡಿಕೆಗಳಾದ ಪ್ಯಾಕೇಜ್ ಟೆಂಡರ್ ಕರೆಯದೆ ಕಾಮಗಾರಿಗಳ ಪ್ರಕಾರ ಟೆಂಡರ್ ಕರೆಯುವಂತೆ ಅಧಿಕಾರಿಗಳಿಗೆ ಸೂಚನೆ ಕೊಡುವುದು, ಮತ್ತು ಗುತ್ತಿಗೆದಾರರಿಗೆ ಅಧಿಕಾರಿಗಳ ಸಮ್ಮುಖದಲ್ಲಿ ತುಂಡು ಗುತ್ತಿಗೆ ಕಾಮಗಾರಿಗಳನ್ನು ಹಂಚುವ ಮೂಲಕ ಅನುಕೂಲ ಮಾಡಿಕೊಡಬೇಕು, ಹಾಗೂ ನಿರ್ಮಿತಿ ಕೇಂದ್ರಕ್ಕೆ ಕಾಮಗಾರಿಗಳನ್ನು ಕೊಡಬಾರದು ಎಂದು ಮನವಿ ಸಲ್ಲಿಸಲಾಯಿತು ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷರಾದ ದೇವಪ್ಪ ಅರಿಕೇರಿ ಮತ್ತು ಎಸ್.ಎ.ಪಾಟೀಲ್, ಹಂಪಯ್ಯಸ್ವಾಮಿ, ದ್ಯಾಮಣ್ಣ ಪೂಜಾರ, ದೇವಪ್ಪ ಕಟ್ಟಿಮನಿ, ಚಂದ್ರಶೇಖರ ಸಿಂಟಾಲೂರ, ಕಮಲ್ ಸಾಬ್, ಖಾಜಾಸಾಬ್, ದ್ಯಾಮಣ್ಣ ಕರಿಗಾರ, ಪರುಶುರಾಮ ಕಿಡದಾಳ ಹಾಜರಿದ್ದರು.

Related posts

Leave a Comment