ಗಂಗಾವತಿ : ಜನಸ್ಪಂದನ ಸಭೆ ನಿಗದಿ

: ಗಂಗಾವತಿ ತಾಲೂಕಿನಲ್ಲಿ ಜನಸ್ಪಂದನ ಸಭೆಗಳನ್ನು ನಡೆಸುವ ದಿನಾಂಕ ಹಾಗೂ ಗ್ರಾಮಗಳ ವಿವರವನ್ನು ಗಂಗಾವತಿ ತಹಸಿಲ್ದಾರ್ ಸಿ.ಡಿ. ಗೀತಾ ಅವರು ನಿಗದಿಪಡಿಸಿದ್ದಾರೆ.  
ನಿಗದಿತ ವೇಳಾ ಪಟ್ಟಿಯನ್ವಯ ೨೦೧೨ ರ ಜನವರಿ ೭ ರಂದು ಮರಳಿ ಹೋಬಳಿಯ ಹೊಸಕೇರಾ ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಸಲಾಗುವುದು.  ಅದೇ ರೀತಿ ಫೆ. ೦೪ ರಂದು ಗಂಗಾವತಿ ಹೋಬಳಿಯ ಹನುಮನಹಳ್ಳಿ, ಮಾರ್ಚ್ ೦೩ ರಂದು ಕಾರಟಗಿ ಹೋಬಳಿಯ ಹುಳ್ಕಿಹಾಳ ಗ್ರಾಮದಲ್ಲಿ ಜನಸ್ಪಂದನ ಸಭೆ ನಡೆಸಲು ನಿಗದಿಪಡಿಸಲಾಗಿದೆ.  ಈ ವ್ಯಾಪ್ತಿಯಲ್ಲಿ ಬರುವ ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಕುರಿತ ಅರ್ಜಿ ಹಾಗೂ ಅಹವಾಲುಗಳನ್ನು ಜನಸ್ಪಂದನ ಸಭೆಯ ಸಂದರ್ಭದಲ್ಲಿ ಸಲ್ಲಿಸಬಹುದಾಗಿದೆ.  ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳು ಜನಸ್ಪಂದನ ಸಭೆಯಲ್ಲಿ ತಪ್ಪದೆ ಭಾಗವಹಿಸುವಂತೆ ಗಂಗಾವತಿ ತಹಸಿಲ್ದಾರ್ ಸಿ.ಡಿ. ಗೀತಾ  ತಿಳಿಸಿದ್ದಾರೆ. 
Please follow and like us:
error