ಮಲ್ಲಿಕಾರ್ಜುನ ನಾಗಪ್ಪನವರಿಗೆ ಯಶ ಕೋರಿಕೆ

ಕೊಪ್ಪಳ, ನ.೨೮ : ಮಾಂತಗೊಂಡ ಮಲ್ಲಿಕಾರ್ಜುನ ನಾಗಪ್ಪ ಮಾಜಿ ಸಚಿವರು ಇವರನ್ನು ಗಂಗಾವತಿಯ ಅವರ ಸ್ವಗೃಹದಲ್ಲಿ ಜಿಲ್ಲೆಯ ಕಾಂಗ್ರೆಸ್ ನಾಯಕರುಗಳಾದ ಶಾಂತಣ್ಣ ಮುದಗಲ್, ಬಸವಲಿಂಗಪ್ಪ ಭೂತೆ, ಜಿಲ್ಲಾ ಕಸಾಪ ಅಧ್ಯಕ್ಷ ವೀರಪ್ಪ ನಿಂಗೋಜಿ, ಯಲಬುರ್ಗಾ ವಾಣಿಜ್ಯೋಧ್ಯಮಿಗಳಾದ ಸಂಗಣ್ಣ ಟೆಂಗಿನಕಾಯಿ, ಅಮರಪ್ಪ ಕಲಬುರ್ಗಿ, ಶೇಖರಪ್ಪ ಕರಂಡಿ ಇವರು ಕಂಡು ಮಾಲಾರ್ಪಣೆ ಮಾಡಿ ತಾವು ರಾಜ್ಯ ನೇಕಾರಿಕೆ ಜವಳಿ ಅಭಿವೃದ್ಧಿ ಮಂಡಳಿಯ ನೂತನ ಅಧ್ಯಕ್ಷರಾಗಿ ಸೇವಾವಕಾಶ ಪಡೆದಿರುವುದಕ್ಕೆ ಅಪಾರ ಸಂತಸವಾಗಿದೆ ಎಂದು ಅಭಿನಂಧಿಸಿದರು. ಇವರ ಅಧಿಕಾರವಧಿಯಲ್ಲಿ ನೇಕಾರರ ಬದುಕಿಗೆ ತಕ್ಕ ಆಸರೆ ದೊರೆತು ಕೈಮಗ್ಗ ಅಭಿವೃದ್ಧಿ ಆಗಲೇಂದು ಆಶಯ ವ್ಯಕ್ತಪಡಿಸಿದರು. 
ಹುಬ್ಬಳ್ಳಿಯ ಕೇಂದ್ರ ಕಛೇರಿಯಲ್ಲಿ ರಾಜ್ಯ ಕೈಮಗ್ಗ ಅಭಿವೃದ್ಧಿ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಲಿರುವ ಎಂ. ಮಲ್ಲಿಕಾರ್ಜುನ ನಾಗಪ್ಪ ಇವರು ಮುಂದಿನ ದಿನಗಳಲ್ಲಿ ರಾಜ್ಯದಾಧ್ಯಂತ ಸಂಚರಿಸಿ ಈ ಉಧ್ಯಮದ ಪ್ರಗತಿಗಾಗಿ ರಾಜ್ಯ, ಕೇಂದ್ರ ಸರ್ಕಾರಗಳ ಯೋಜನೆಗಳನ್ನು ಸಾಕಾರ ಗೊಳಿಸುತ್ತಾರೆಂದು ವಾಣಿಜ್ಯೋಧ್ಯಮಿ ಕೆ. ಕಾಳಪ್ಪ ಆಶಯ ವ್ಯಕ್ತಪಡಿಸಿದರು.

Related posts

Leave a Comment