You are here
Home > Koppal News > ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಶಾಸಕ ಸಂಗಣ್ಣ ಕರಡಿ ಅವರಿಂದ ಮೋಟಾರ್ ವಿತರಣೆ

ಗಂಗಾ ಕಲ್ಯಾಣ ಫಲಾನುಭವಿಗಳಿಗೆ ಶಾಸಕ ಸಂಗಣ್ಣ ಕರಡಿ ಅವರಿಂದ ಮೋಟಾರ್ ವಿತರಣೆ

ಕೊಪ್ಪಳ ಡಿ. ೧೯ : ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಲಾಗಿರುವ ೧೮ ಫಲಾನುಭವಿಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಪಂಪ್ ಮೋಟಾರ್ ಗಳನ್ನು ವಿತರಿಸಿದರು.
  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದಿಂದ ಗಂಗಾ ಕಲ್ಯಾಣ ಯೋಜನೆಯಡಿ ಮಂಜೂರು ಮಾಡಲಾಗಿರುವ ಪಂಪ್ ಮೋಟಾರ್‍ಸ್ ಗಳನ್ನು ಫಲಾನುಭವಿಗಳಿಗೆ ವಿತರಿಸಿ ಮಾತನಾಡಿದ ಶಾಸಕ ಸಂಗಣ್ಣ ಕರಡಿ ಅವರು, ಪ್ರಸಕ್ತ ಸಾಲಿನಲ್ಲಿ ಸ್ವಾವಲಂಬನಾ ಯೋಜನೆಯಡಿ ೧೪ ಫಲಾನುಭವಿಗಳಿಗೆ ತಲಾ ೦೧ ಲಕ್ಷ ರೂ.ಗಳಂತೆ ಒಟ್ಟು ೧೪ ಲಕ್ಷ, ಅರಿವು ಯೋಜನೆಯಡಿ ೫೭ ವಿದ್ಯಾರ್ಥಿಗಳ ಉನ್ನತ ವ್ಯಾಸಂಗ ಮುಂದುವರಿಕೆಗೆ ೧೧. ೦೪ ಲಕ್ಷ ರೂ.ಗಳ ಶೈಕ್ಷಣಿಕ ಸಾಲ, ಶ್ರಮ ಶಕ್ತಿ ಯೋಜನೆಯಡಿ ೩೧ ಫಲಾನುಭವಿಗಳಿಗೆ ೬.೪೦ ಲಕ್ಷ ರೂ., ಮೈಕ್ರೋ ಯೋಜನೆಯಡಿ ೧೩ ಸ್ವ-ಸಹಾಯ ಗುಂಪುಗಳಿಗೆ ತಲಾ ೧೦ ಸಾವಿರದಂತೆ ಒಟ್ಟು ೨೬ ಲಕ್ಷ, ನೇರಸಾಲ ಯೋಜನೆಯಡಿ ೧೩ ಫಲಾನುಭವಿಗಳಿಗೆ ತಲಾ ೦೧ ಲಕ್ಷ ರೂ.ಗಳಂತೆ ಒಟ್ಟು ೧೩ ಲಕ್ಷ ರೂ. ಸಾಲ ವಿತರಿಸಲಾಗಿದೆ ಎಂದರು.
  ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಝಾಕಿರ ಹುಸೇನ್, ಭೂನ್ಯಾಯ ಮಂಡಳಿ ಸದಸ್ಯ ಹಾಲೇಶ್ ಕಂದಾರಿ, ಮುಖಂಡರುಗಳಾದ ಶರೀಫ್‌ಸಾಬ ಇಟಗಿ, ಮಾಜೀದ ಗುರುಗಳು, ನೂರುಲ್ಲಾ ಖಾದ್ರಿ, ಡಾ. ಜ್ಞಾನಸುಂದರ್ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply

Top