ವಿದ್ಯಾ ವಿಕಾಸ ಕನ್ನಡ ಮಾದ್ಯಮ ೨೧ ನೇ ಶಾಲಾ ವಾರ್ಷಿಕೋತ್ಸವ ಸಮಾರಂಭ ಕಾರ್ಯಕ್ರಮ

 ತಾಲೂಕಿನ ಭಾಗ್ಯನಗರ ವಿದ್ಯಾವಿಕಾಸ ಕನ್ನಡ ಮಧ್ಯಮ ಪ್ರಾಥಮಿಕ ಹಾಗೂ ಪ್ರೌಢಶಾಲಾ ವಾರ್ಷಿಕೋತ್ಸವ ದಿನಾಂಕ ೨೬ ರಂದು ಭಾನುವಾರ ಸಂಜೆ ೦೫ ಗಂಟೆಗೆ ಜರುಗಲಿದೆ. 
ಕಾರ್ಯಕ್ರಮದ ಉದ್ಘಾಟನೆಯನ್ನು ಮಾನ್ಯ ಲೋಕಸಭಾ ಸದಸ್ಯರಾದ ಶಿವರಾಮಗೌಡ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ರಾಘವೇಂದ್ರ ಹಿಟ್ನಾಳ ಶಾಸಕರು ಕೊಪ್ಪಳ ವಹಿಸಲಿದ್ದಾರೆ. ಅತಿಥಿಗಳಾಗಿ ವಿ.ಪ.ಸ. ರಾದ ಹಾಲಪ್ಪ ಆಚಾರ, ಮಾಜಿ ಶಾಸಕರಾದ ಸಂಗಣ್ಣ ಕರಡಿ, ಜಿ.ಪಂ ಅಧ್ಯಕ್ಷರಾದ ಲೇಬಗೇರಿ ಕ್ಷೇತ್ರ ವನೀತಾ ಗಡಾದ, ತಾ.ಪಂ ಸದಸ್ಯರಾದ ದಾನಪ್ಪ ಕವಲೂರು, ತಾ.ಪಂ ಸದಸ್ಯರಾದ ಶ್ರೀನಿವಾಸ ಹ್ಯಾಟಿ, ಗ್ರಾ.ಪಂ ಭಾಗ್ಯನಗರ ಅಧ್ಯಕ್ಷರಾದ ಹೊನ್ನುರಸಾಬ್, ಉಪನಿರ್ದೆಶಕರಾದ ಜಿ.ಹೆಚ್ ವೀರಣ್ಣ ಕೊಪ್ಪಳ, ಕ್ಷೇತ್ರ ಶಿಕ್ಷಣಧಿಕಾರಿಗಳಾದ ಉಮೇಶ ಪೂಜಾರ ಕೊಪ್ಪಳ, ನಿವೃತ್ತ ಪ್ರಚಾರ್ಯರಾದ ಸಿ.ವಿ.ಜಡಿಯವರು, ಆಗಮಿಸಲಿದ್ದಾರೆ. 
            ಇದೇ ಸಂದರ್ಭದಲ್ಲಿ ಅಂತರಾಷ್ಟ್ರೀಯ  ಮಾಧ್ಯಮ ಪ್ರಶಸ್ತಿ ಪುರಸ್ಕೃತರಾದ   ಸಿರಾಜ ಬಿಸರಳ್ಳಿ ಇವರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. 
 ಈ ಕಾರ್ಯಕ್ರಮಕ್ಕೆ ಸರ್ವರು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಆಡಳಿತ ಮಂಡಳಿಯ ಅಧ್ಯಕ್ಷರಾದ ರಾಘವೇಂದ್ರ ಪಾನಘಂಟಿ ಅಧ್ಯಕ್ಷರು ವಿ.ವಿ.ಎಸ್ ಸಂಸ್ಥೆ ಹಾಗೂ ಶಾಲಾ ಮುಖ್ಯೋಪಾಧ್ಯಯರಾದ  ವಾದಿರಾಜ ದೇಸಾಯಿ ಕೋರಿದ್ದಾರೆ. 

Leave a Reply