ಜಗದ್ಗುರು ರೇಣುಕಾ ಚಾರ್ಯರ ಜಯಂತ್ಯೋತ್ಸವ

ಕೊಪ್ಪಳ, ೧೩- ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ದಿ. ೧೮ ರಂದು ಜಗದ್ಗುರು ರೇಣುಕಾ ಚಾರ್ಯರ ಜಯಂತ್ಯೋತ್ಸವ ಹಾಗೂ ಸಮುದಾಯ ಭನವದ ಮತ್ತು ವಸತಿ ನಿಲಯದ ಅಡಿಗಲ್ಲು ಸಮಾರಂಭವನ್ನು ಎಂದು ವೀರಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಸಿ.ವಿ. ಕಲ್ಮಠ ಹೇಳಿದರು.
ಅವರು ಮಂಗಳವಾರ ದಂದು ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದರು.
ಅಂದು ಬೆಳಿಗ್ಗೆ ೮ ಗಂಟೆಗೆ ಗವಿಮಠದಿಂದ ಆರಂಭವಾಗುವ ಶೋಭಾಯಾತ್ರೆ, ೯ ಗಂಟೆಗೆ ನಗರದ ಶಿವ ಚಿತ್ರಮಂದಿರ ತಲುಪಲಿದೆ.
ಶ್ರೀ ಗವಿಸಿದ್ದೇಶ್ವರ ಮಹಾ ಸ್ವಾಮಿಗಳು, ಶ್ರೀ ನಾಗಭೂಷಣ ಶಿವಾಚಾರ್ಯ ಮಹಾಸ್ವಾಮಿ ಗಳು, ಶ್ರೀ ಸಿದ್ಧಲಿಂಗ ಶಿವಾ ಚಾರ್ಯ ಮಹಾಸ್ವಾಮಿಗಳು, ಮೈನಳ್ಳಿಯ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಮಹಾಸ್ವಾಮಿ ಗಳು ದಿವ್ಯ ಸಾನಿಧ್ಯ ವಹಿಸುವರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ವೀರಮಹೇಶ್ವರ ಕ್ಷೇಮಾ ಭಿವೃದ್ಧಿ ಸಂಘದ ಅಧ್ಯಕ್ಷ ಸಿ.ವಿ. ಕಲ್ಮಠ ವಹಿಸಲಿದ್ದಾರೆ, ಮುಖ್ಯ ಅತಿಥಿಗಳಾಗಿ ಶ್ರೀ ಡಾ. ಸಿದ್ದರಾಮೇ ಶ್ವರ ಶರಣರು, ನಗರಸಭೆಯ ಅಧ್ಯಕ್ಷ ಸುರೇಶ ದೇಸಾಯಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಪ್ಪಣ್ಣ ಪದಕಿ, ಕೆ.ಎಂ. ವಿಶ್ವನಾಥ ಸ್ವಾಮಿಗಳು, ಬಂಗಾ ರೇಶ ಹಿರೇಮಠ, ಜಿಲ್ಲಾ ವೀರ ಮಹೇಶ್ವರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ತಿಪ್ಪೇರುದ್ರಸ್ವಾಮಿ ಮತ್ತಿತರರು ಆಗಮಿಸಲಿದ್ದಾರೆ ಎಂದರು.
ಸನ್ಮಾನ : ಶಾಸಕ ಸಂಗಣ್ಣ ಕರಡಿ, ಗುತ್ತಿಗೆದಾರ ಎಸ್.ಆರ್. ನವಲಿ ಹಿರೇಮಠ ಮತ್ತಿತರರು ಸನ್ಮಾನಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಪ್ರಭು ಸ್ವಾಮಿ ಸಾಲಿಮಠ, ಅಶೋಕ ಮತ್ತಿತರರು ಉಪಸ್ಥಿತರಿದ್ದರು.

Leave a Reply