ಗುಜರಾತ್ ಹತ್ಯಾಕಾಂಡ ಸಾಕ್ಷಿಯ ಹತ್ಯೆ

ಅಹ್ಮದಾಬಾದ್, ನ.5: ಗುಜರಾತ್ ಹತ್ಯಾಕಾಂಡ ಪ್ರಕರಣದ ಸಾಕ್ಷಿಯೊಬ್ಬನನ್ನು ಶನಿವಾರ ಮುಂಜಾನೆ ಹಲ್ಲೆ ನಡೆಸಿ ಕೊಲ್ಲಲಾಗಿದೆ. ಕೊಲೆಗೀಡಾಗಿರುವ ನದೀಮ್ ಸೈಯದ್ ಎಂಬವರು ಮಾಹಿತಿ ಹಕ್ಕು ಹೋರಾಟಗಾರರೂ ಆಗಿದ್ದಾರೆ. ಇವರ ಮೇಲೆ ಅಹ್ಮದಾಬಾದ್‌ನ ಜೋಹಪುರದಲ್ಲಿ ಅಜ್ಞಾತ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ. ಸೈಯದ್ ಆಸ್ಪತ್ರೆಯ ಹಾದಿಯಲ್ಲೇ ಮೃತಪಟ್ಟರೆಂದು ಘೋಷಿಸಲಾಗಿದೆ. ಅಹ್ಮದಾಬಾದ್ ಕ್ರೈಂ ಬ್ರಾಂಚ್ ಪ್ರಕರಣವನ್ನು ಕೈಗೆತ್ತಿಕೊಂಡಿದ್ದು, ಹತ್ಯೆಯ ಕುರಿತು ತನಿಖೆ ನಡೆಸಲಿದೆ.
ನರೋಡಾ ಪಾಟಿಯಾ ಹತ್ಯಾಕಾಂಡದ ಕುರಿತು ಸೈಯದ್ ನ್ಯಾಯಾಲಯದಲ್ಲಿ ಸಾಕ್ಷ ನುಡಿದಿದ್ದರು. ಜೋಹಪುರ ಪ್ರದೇಶದ ನೈರ್ಮಲ್ಯದ ವಿಚಾರ ವಾಗಿ ಗುಜರಾತ್ ಹೈಕೋರ್ಟ್‌ಗೆ ಅನೇಕ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿದ್ದ ಸೈಯದ್, ಗುಜರಾತ್ ದಂಗೆ ಪ್ರಕರಣದ ಸಾಕ್ಷಿಯೂ ಆಗಿದ್ದರು. ಅವರು ರಾಜ್ಯದ ಹಲವು ರಾಜಕೀಯ ನಾಯಕರ ವಿರುದ್ಧವೂ ಪ್ರಕರಣಗಳನ್ನು ಹೂಡಿದ್ದರು.ನಾಗರಿಕ ಸಮಸ್ಯೆಗಳ ಬಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಹಾಗೂ ಮಾಹಿತಿ ಹಕ್ಕು ಅರ್ಜಿ ಸಲ್ಲಿಕೆಗಾಗಿ ಹೆಸರುವಾಸಿಯಾಗಿದ್ದ ಸೈಯದ್‌ರ ಮೇಲೆ ಕಳೆದ ವರ್ಷ ಸ್ಥಳೀಯ ಗೂಂಡಾಗಳು ಮಾರಣಾಂತಿಕ ಹಲ್ಲೆ ನಡೆಸಿದ್ದರು.

Related posts

Leave a Comment