ಮಧುಮೇಹ ರೋಗಿಗಳ ತಪಾಸಣೆ ಶಿಬಿರ

 ರೋಟರಿ ಕ್ಲಬ್, ಕೊಪ್ಪಳ ಇವರ ಆಶ್ರಯದಲ್ಲಿ ೬೧ನೇಯ ಮಧುಮೇಹ ರೋಗಿಗಳ ತಪಾಸಣೆ ಶಿಬಿರವನ್ನು ಇದೇ ತಿಂಗಳು ೧೩ ರವಿವಾರದಂದು ಏರ್ಪಡಿಸಲಾಗಿದೆ. ಆಸಕ್ತರೆಲ್ಲರು ಈ ಶಿಬಿರದಲ್ಲಿ ಭಾಗವಹಿಸಿ ಇದರ ಲಾಭ ಪಡೇದುಕೊಳ್ಳಲು ವಿನಂತಿಸಲಾಗಿದೆ. ಶಿಬಿರಕ್ಕೆ ಬರುವ ರೋಗಿಗಳು ದಿನಾಂಕ ೩೦/೦೧/೨೦೧೩ ರಂದು ಮುಂಜಾನೆ ೮ ಗಂಟೆಗೆ ಊಟ ಮಾಡಿ ೧೦ ಗಂಟೆಗೆ ಶಿಬರಕ್ಕೆ ಬರಬೇಕು ( ಈ ಸಲ ಊಟವಾದ ೨ ಗಂಟೆಯ ನಂತರ ರಕ್ತ ಪರೀಕ್ಷೆ ಮಾಡಲಾಗುವುದು ). ಈ ಸಲ ೨೦೦ ರೂ ನೊಂದಣಿ ಶುಲ್ಕವನ್ನು ನೀಡಿ ತಮ್ಮ ಸದಸ್ಯತ್ವವನ್ನು ನವೀಕರಿಸಬೇಕೆಂದು ವಿನಂತಿಸಲಾಗಿದೆ. 
ಬೆಂಗಳೂರಿನ ವಿಠ್ಠಲಾ ಅಂತರಾಷ್ಟ್ರೀಯ ನೇತ್ರಾ ಚಿಕಿತ್ಸಾ ಸಂಸ್ಥೆಯ ನೇತ್ರ ತಜ್ಷರು ವೈದ್ಯರು ಭಾಗವಹಿಸಿ ರೋಗಿಗಳಿಗೆ ಚಕಿತ್ಸೆ ನೀಡುವರು. ಅಲ್ಲದೆ ವಿಶೇಷ ರಕ್ತ ಪರೀಕ್ಷೆ ಮಾಡುವ ಸಂಚಾರಿ ಪ್ರಯೋಗಾಲಯವು ಲಭ್ಯ ವಿರುವುದು. ಈ ಪ್ರಯೋಗಾಲಯದ ಸೌಲಭ್ಯವು ರೋಗಿಗಳಿಗೆ ರೀಯಾತಿ ದರದಲ್ಲಿ ದೊರೆಯುವುದು. ಪ್ರಯೋಗಾಲಯದ ಸೌಲಭ್ಯವನ್ನು ಮಧು ಮೇಹ ರೋಗಿಗಳಲ್ಲದವರೂ ಸಹ ರೀಯಾತಿ ದರಗಳಲ್ಲಿ ಪಡೆಯುಬಹುದು. ವಿಶೇಷ ರಕ್ತ ಪರೀಕ್ಷೆ ಮಾಡಿಕೊಳ್ಳುವರು. ದಿನಾಂಕ ೧೩/೦೧/೨೦೧೩ ರಂದು ಮುಂಜಾನೆ ೮ ಗಂಟೆಗೆ ಯಾವುದೇ ಆಹಾರ ಸೇವಿಸಿದೆ ಬರಬೇಕು. 
ಸ್ಥಳ ಡಾ. ಕೆ.ಜಿ.ಕುಲಕರ್ಣಿ ಆಸ್ಪತ್ರೆ  
ಸಂಪರ್ಕ ೦೮೫೩೯-೨೨೦೪೬೪, ೯೪೪೮೩೮೦೪೬೪  
ದಿನಾಂಕ ೧೩/೦೧/೨೦೧೩ ಸಮಯ ಬೆಳಿಗ್ಗೆ ೦೭:೩೦ ರಿಂದ ಮದ್ಯಾಹ್ನ : ೨:೩೦ ರವರೆಗೆ.  
Please follow and like us:
error