ಅಲ್ಲಾಗಿರಿರಾಜ್‌ರ ನೂರ್ ಗಜಲ್ ಗೆ ಮತ್ತೊಂದು ಪ್ರಶಸ್ತಿ.

ಕನಕಗಿರಿ ೨೮ ರಾಯಚೂರ
ಜಿಲ್ಲಾಯ ಪ್ರತಿಷ್ಠಿತ ಶ್ರೀ ಮಹಿಮಾ ಗ್ರಾಮೀಣ ಶಿಕ್ಷಣ ಸಂಸ್ಕೃತಿಕ ಸಂಸ್ಥೆ ಉಮಲೂಟಿ
ಸಿಂಧನೂರು ತಾಲುಕು ಇವರು ಕೊಡ ಮಾಡುವ ೨೦೧೪-೧೫ ಸಾಲಿನ ಶ್ರೀ ಮಹಿಮಾ ಕೌಸ್ತುಭ ಸಾಹಿತ್ಯ
ಪ್ರಶಸ್ತಿಗೆ ಈ ಸಾರಿ ಜಿಲ್ಲೆಯ ಕನಕಗಿರಿಯ ಗಜಲ್ ಕವಿ ಅಲ್ಲಾಗಿರಿರಾಜ್ ಅವರ ನೂರ್ ಗಜಲ್
ಕೃತಿ ಆಯ್ಕೆಯಾಗಿದೆ
ಸಂಸ್ಥೆಯ ವಾರ್ಷಿಕೊತ್ಸವ ಮತ್ತು ಕನ್ನಡ ರಾಜ್ಯೋತ್ಸವ ನಿಮಿತ್ಯ
ಇದೇ ನವೆಂಬರ್ ೧ ರಂದು ಉಮಲೂಟಿ ಗ್ರಾಮದಲ್ಲಿ ಜರುಗುವ ಅದ್ದೂರಿ ಸಮಾರಂಭದಲ್ಲಿ
ಅಲ್ಲಾಗಿರಿರಾಜ್ ಕನಕಗಿರಿ ಇವರಿಗೆ ಶ್ರೀ ಮಹಿಮಾ ಕೌಸ್ತುಭ ಸಾಹಿತ್ಯ ಪುರಸ್ಕಾರ ಮತ್ತು
೫೦೦೧ ರೂಪಾಯಿ ನದಗು ಹಣ ೧೦ ಗ್ರಾಂ ರಜತ ಪದಕ ಮತ್ತು ನೆನಪಿನ ಕಾಣಿಕೆಯನ್ನು ಸಂಸ್ಥೆಯ
ಗೌರವ ಅಧ್ಯಕ್ಷರಾದ ಉಮಲೂಟಿ ಸಂಸ್ಥಾನದ ಅನ್ನದಾನರಾಜ ನಾಡಗೌಡ ಅವರು ಪ್ರಶಸ್ತಿ ಪ್ರಧಾನ
ಮಾಡುವರು ಎಂದು ಶ್ರೀ ಮಹಿಮಾ ಗ್ರಾಮೀಣ ಶಿಕ್ಷಣ ಸಂಸ್ಕೃತಿಕ ಸಂಸ್ಥೆಯ ಪ್ರಧಾನ
ಕಾರ್ಯದರ್ಶಿ ರಾಜಶೇಖರ್  ಉಮಲೂಟಿ  ಅವರು ತಿಳಿಸಿದ್ದಾರೆ.

Please follow and like us:
error