You are here
Home > Koppal News > ಸಡಗರದ ಗಣರಾಜ್ಯ ದಿನಾಚರಣೆ.

ಸಡಗರದ ಗಣರಾಜ್ಯ ದಿನಾಚರಣೆ.

 ನಗರದ ಏಳನೇ ವಾರ್ಡಿನ ದಿಡ್ಡಿಕೇರಿ ಓಣಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ೬೬ನೇ ಗಣರಾಜ್ಯ ದಿನಾವರಣೆಯನ್ನು ಮಕ್ಕಳ ಪ್ರಭಾತಪೇರಿ ಯೊಂದಿಗೆ ಪ್ರಾರಂಭವಾಯಿತು. ಜಯಘೋಷಗಳೋಂದಿಗೆ ಸಾಗಿ ಶಾಲಾ ಆವರಣದಲ್ಲಿ ಸೇರಲಾಯಿತು.
            ನಗರ ಸಭೆಯ ಸದಸ್ಯಣಿಯಾದ ಶ್ರೀಮತಿ ನಸಿಮಾಬೇಗಮ ಸೋಂಪೂರ ಅವರು ದ್ವಜಾರೋಹಣ ನೇರವೇರಿಸಿದರು.ಮಾಜಿ ಸದಸ್ಯರಾದ ಜಿಲಾನಸಾಬ ನಿಷಾನಿ,ಖಾಜಾವಲಿ ಕುರಿ ಸರ್ದಾರಸಾಬ, ಮರ್ದಾನಲಿ,ಮಹಿಬೂಬಸಾಬ,ಮೌಲಾಹುಸೇನ್ ಯುವಕರು.ಪಾಲ್ಗೋಂಡಿದ್ದರು.
      ಸಭೆಯನ್ನು ಉದ್ಧೇಶಿಸಿ ಮಾತನಾಡಿದ ಮುಖ್ಯೋಪಾದ್ಯಾಯರು ಮತ್ತು ಶಿಕ್ಷಕರ ಪತ್ತಿನ ಸಂಘದ ಅಧ್ಯಕ್ಷರಾದ ಮೈಲಾರಗೌಡ ಹೊಸಮನಿ ಮಾತನಾಡಿ ೧೯೫೦ ಜನೇವರಿ ೨೬ರಂದು ಈದೇಶ ವಿಶ್ವದ ಬೃಹತ್ ಸಂವಿಧಾನ ಹೊಂದಿದ ದಿನ,ಇದರ ರುವಾರಿಗಳಾಗಿ ಡಾ ರಾಜೇಂದ್ರ ಪ್ರಸಾದ ಮತ್ತು ಅಂಬೇಡ್ಕರ್ ರವರು ಮಾಹಾಕಾರ್ಯ ನಿರ್ವಹಿಸಿದರು,ಸರ್ವಸ್ವಾತಂತ್ಯ, ಸಾರ್ವಭೌಮ ಸರಕಾರ ಇದರ ಗುರಿ, ಇಂದು ಭಾರತವು ವಿಶ್ವ ಬೇರಗು ಪಡುವಷ್ಟು ಅಭಿವೃದ್ಧಿ ಸಾಧಿತವಾಗಿದ್ದು ನಮ್ಮ  ಈ ವೇವಸ್ಥೆಯ ಅಡಿಪಾಯದಲ್ಲಿಯೇ ,ಓಣಿಯ ಹಿರಿಯರೆಲ್ಲರು ತಮ್ಮ ಓಣಿಯ ಶೈಕ್ಷಣಿಕ ಕಾರ್ಯಕ್ರಮಗಳಿಗೆ ಪ್ರೋತ್ಸಾಯಿಸಿ ,ಮತ್ತು ಶಾಲೆ ನಿರಂತರ ಸಂಪರ್ಕಕೊಂಡಿಯಾಗಿ ಬೆಂಬಲ ನೀಡಿ ಶೈಕ್ಷಣಿಕ ಅಭಿವೃದ್ಧಿಗೆ ಸಹಕರಿಸಿದಾಗ ಮಾತ್ರ ನಾಳಿನ ನಾಡಿನ ನೇತಾರರನ್ನು ತಯಾರಿಸಲು ಸಾದ್ಯವಾಗುತ್ತದೆ ಎಂದು ನುಡಿದರು. 
           ಸಹಶಿಕ್ಷಕ  ರಾಜಮಹಮ್ಮದ ಹುನಗುಂದ ಅವರು  ಸ್ವಾಗತ ಮತ್ತು ವಂದನೆಯೊಂದಿಗೆ ಕಾರ್ಯಕ್ರಮವನ್ನು ಮುಗಿಸಲಾಯಿತು. 
                

Leave a Reply

Top