You are here
Home > Koppal News > ಕಸಾಪ ಚುನಾವಣೆ : ರಾಶೇಖರ ಅಂಗಡಿ ಪರ ಅಬ್ಬರದ ಪ್ರಚಾರ

ಕಸಾಪ ಚುನಾವಣೆ : ರಾಶೇಖರ ಅಂಗಡಿ ಪರ ಅಬ್ಬರದ ಪ್ರಚಾರ

 ತಾಲೂಕಿನ ಕಿನ್ನಾಳದಲ್ಲಿ ಕಸಾಪ ಚುನಾವಣೆ ನಿಮಿತ್ಯ ಅಭ್ಯರ್ಥಿ ರಾಜಶೇಖರ ಅಂಗಡಿ ಅವರ ಪರ ಅಬ್ಬರದ ಪ್ರಚಾರ ಮಾಡಲಾಯಿತು. ಈ ಸಂದರ್ಭದಲ್ಲಿ ತಾ.ಪಂ. ಮಾಜಿ ಅಧ್ಯಕ್ಷ, ಹಾಲಿ ಸದಸ್ಯ ಅಮರೇಶ ಉಪಲಾಪುರ ಮಾತನಾಡಿ, ರಾಜಶೇರ ಅಂಗಡಿ ಸದಾ ಕ್ರಿಯಾಶೀಲ ವ್ಯಕ್ತಿಯಾಗಿದ್ದು, ಇವರ ಗೆಲುವಿಗಾಗಿ ಕಿನ್ನಾಳ ಮತ್ತು ಮಾದಿನೂರಿನ ಮತಗಳನ್ನು ರಾಜಶೇಖರ ಅವರಿಗೆ ಹಾಕುವ ಮೂಲಕ ಬಹುಮತದಿಂದ ಆರಿಸಿ ತರವುದು ಖಚಿತವೆಂದರು.
ಕನ್ನಡ ಕಟ್ಟುವ ಕೆಸದಲ್ಲಿ ಸಮಾನ ಮನಸ್ಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹಿರಿಯ ಸಾಹಿತಿಗಳ ಹಾಗೂ ಆಜೀವ ಸದಸ್ಯರ ಮಾರ್ಗದರ್ಶನದಲ್ಲಿ ಕಾರ್ಯನಿರ್ವಹಿಸುವುದಾಗಿ ಅಭ್ಯರ್ಥಿ ರಾಜಶೇಖರ ಅಂಗಡಿ ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕಸಾಪ ನಿಕಟಪೂರ್ವ ತಾಲೂಕ ಅಧ್ಯಕ್ಷ ಜಿ.ಎಸ್. ಗೋನಾಳ, ಶೇಖರಪ್ಪ ಶಿವಸಿಂಪಿ, ಈರಣ್ಣ ಗಂಗಾವತಿ, ಬಸವರಾಜ ಚಿಲವಾಡ್ಗಿ, ಸುಭಾಷರಡ್ಡಿ, ಬಸಪ್ಪ ದೇಸಾಯಿ, ಎ.ಪಿ. ಅಂಗಡಿ, ಶ್ರೀನಿವಾಸ ಚಿತ್ರಗಾರ, ಶಶಿಧರ ಜೀರ‍್ಗಿ, ರಾಕೇಶ ಕಾಂಬ್ಳೇಕರ್, ಕಲ್ಲನಗೌಡ ಪಾಟೀಲ್ ಸೇರಿದಂತೆ ಇನ್ನಿತರರು ಇದ್ದರು.

Leave a Reply

Top